07 June 2025 | Join group

ಟರ್ಕಿಗೆ ದೇಶಕ್ಕೆ ತಕ್ಕ ಪಾಠ ಕಲಿಸುತ್ತಿರುವ ಭಾರತೀಯರು : ನಮ್ಮಲ್ಲಿಗೆ ಬನ್ನಿ ಎಂದು ಕೈ ಮುಗಿದು ಬೇಡಿಕೊಂಡ ಟರ್ಕಿ !

  • 14 May 2025 03:49:46 PM

ಪಾಕಿಸ್ತಾನದ ಜೊತೆ ಸೇರಿಕೊಂಡು 'ಕಾಲ್ ಕೆರ್ಕೊಂಡು ಜಗಳಕ್ಕೆ ಬಂದಿದ್ದ' ಟರ್ಕಿ ಈಗ ಬಾಯ್ಕಾಟ್ ಟರ್ಕಿ (Boycott Turkey) ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ದಿಕ್ಕಾರದ ಬಲೆಗೆ ಬಿದ್ದಿದೆ.  ಟರ್ಕಿ ಬಟ್ಟೆ ಮತ್ತು ಇನ್ನಿತರ ದೈನಂದಿನ ಬಳಕೆಗಳ ಉತ್ಪಾದನೆಯಲ್ಲಿ ಉತ್ತಮ ಸ್ಥಾನವನ್ನು ಹೊಂದಿದೆ. ಸಾಮಾಜಿಕ ಜಾಲತಾಣದಲ್ಲಿ ಟರ್ಕಿಯ ಉನ್ನತ ಬ್ರಾಂಡ್ ಗಳನ್ನು ಗುರುತಿಸಿ ಭಾರತದ ಸಾಮಾಜಿಕ ಜಾಲತಾಣದಲ್ಲಿ ' ಈ ವಸ್ತುಗಳನ್ನು ಖರೀದಿಸಬೇಡಿ, ಯಾಕೆಂದರೆ ಇದು ಟರ್ಕಿ ದೇಶದ ಉತ್ಪನ್ನ' ಎನ್ನುವ ಪೋಸ್ಟ್ ಗಳು ಬಹಳಷ್ಟು ಹರಿದಾಡುತ್ತಿವೆ.

 

ಅದರ ಜೊತೆಗೆ ಇದೀಗ ಟರ್ಕಿಗೆ ಮತ್ತೊಂದು ತಲೆಬಿಸಿ ಎದುರಾಗಿದೆ. ಭಾರತದ ಪ್ರವಾಸಿಗರು ಟರ್ಕಿ ದೇಶಕ್ಕೆ ಮುಂಗಡ ಬುಕಿಂಗ್ ಮಾಡಿದ್ದ ಟಿಕೆಟ್ ಗಳನ್ನು ರದ್ದುಗೊಳಿಸುತ್ತಿರುವುದು ಟರ್ಕಿ ದೇಶದ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬೀಳಲಿದೆ.

 

ಟರ್ಕಿ ದೇಶ 'ಬೆತ್ತ ಕೊಟ್ಟು ಪೆಟ್ಟು ತಿನ್ನುತ್ತಿದೆ'. ಮಾಡುವುದೆಲ್ಲಾ ಮಾಡಿ ಈಗ ಭಾರತದ ಪ್ರವಾಸಿಗರು ಇವರ ದೇಶಕ್ಕೆ ಭೇಟಿ ಕೊಡಬೇಕಂತೆ. ಟರ್ಕಿ ಪ್ರವಾಸೋದ್ಯಮ ಇಲಾಖೆ ಭಾರತಕ್ಕೆ ಪತ್ರ ಬರೆದಿದೆ ಅದರಲ್ಲಿ 'ಭಾರತೀಯರು ಟರ್ಕಿ ದೇಶಕ್ಕೆ ಬರುವ ಯಾವುದೇ ಪ್ರವಾಸಗಳನ್ನು ಮುಂದೂಡಲು ಅಥವಾ ರದ್ದುಗೊಳಿಸಬಾರದು' ಎಂದು ತಿಳಿಸಿದೆ.

 

ಇತ್ತೀಚಿನ ದಿನಗಳಲ್ಲಿ ಭಾರತ ದೇಶದಿಂದ ಶ್ರೀಮಂತ ಮತ್ತು ಮಧ್ಯಮ ವರ್ಗದ ಜನರು ಅತಿಯಾಗಿ ದೇಶ-ವಿದೇಶಗಳ ಪ್ರವಾಸಗಳನ್ನು ಕೈಗೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ವಿಶ್ವದ ಯಾವುದೇ ಪ್ರವಾಸಿತಾಣ ಆಗಿರುವ ದೇಶಗಳು ಭಾರತದ ಪ್ರವಾಸಿಗರ ಬರವಿಕೆಯನ್ನು ಹೆಚ್ಚಿಸಲು ಇಚ್ಚಿಸುತ್ತಾರೆ. 

 

ಬಹಳಷ್ಟು ದೇಶಗಳ ಆರ್ಥಿಕ ಪರಿಸ್ಥಿತಿ ಪ್ರವಾಸಿಗರ ಆದಾಯದಿಂದ ಅವಲಂಬಿತವಾಗಿದೆ. ಆದರೆ ಟರ್ಕಿ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರೇರೇಪಿಸುವ ಪಾಕಿಸ್ತಾನದ ಜೊತೆ ಕೈಜೋಡಿಸಿದ ಪರಿಣಾಮ ಪ್ರವಾಸೋದ್ಯಮಕ್ಕೆ ಆದಾಯಕ್ಕೆ ಭಾರಿ ದೊಡ್ಡ ಹೊಡೆತ ಬೀಳಲಿದೆ.

 

ಪಾಕಿಸ್ತಾನ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರ ವಿರುದ್ಧ ಭಾರತ ದಾಳಿ ನಡೆಸಿದ ಕ್ಷಣಾರ್ಧದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿತ್ತು. ಭಾರತ ಪಾಕಿಸ್ತಾನದಲ್ಲಿ ನೆಲೆಸಿರುವ 9 ಉಗ್ರ ತಾಣಗಳಿಗೆ ದಾಳಿ ನಡೆಸಿದ ನಂತರ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ಎದುರಾದ ಸಂದರ್ಭದಲ್ಲಿ ಟರ್ಕಿ ಪೂರೈಸಿದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ ಮಾಡಲು ಪ್ರಯತ್ನ ಪಟ್ಟಿತ್ತು.

 

ಭಾರತ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದ ಪರವಾಗಿ ನಿಂತ ದೇಶ ಅಂದರೆ ಅದು ಟರ್ಕಿ. ಈ ದೇಶದಲ್ಲಿ ನೆರೆ ಬಂದ ಸಂದರ್ಭದಲ್ಲಿ ಭಾರತ ಸರ್ಕಾರ ಮೊದಲಿಗೆ ತನ್ನ ನೆರವನ್ನು ಘೋಷಿಸಿದ್ದು ಕೂಡ ಟರ್ಕಿಯ ಪ್ರಧಾನಿಗೆ ನೆನಪಾಗಿರಲಿಲ್ಲ. ಇದೀಗ ಭಾರತ ದೇಶದ ಜನತೆ ಟರ್ಕಿಗೆ ತಕ್ಕ ಪಾಠ ಕಲಿಸಲು ಸನ್ನದ್ಧರಾಗಿದ್ದಾರೆ.

 

'ಬಾಯ್ಕಾಟ್ ಟರ್ಕಿ' ಎನ್ನುವ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಟರ್ಕಿಯ ಉತ್ಪಾದನೆಗಳ ವಿವರಣೆಗಳನ್ನು ಸಾಮಾಜಿಕ ಜಾಣತಾರದಲ್ಲಿ ಹರಿಬಿಟ್ಟು ಈ ದೇಶದ ಉತ್ಪಾದನೆಗಳನ್ನು ಖರೀದಿ ಮಾಡಬಾರದು ಎನ್ನುವ ಸಂದೇಶವನ್ನು ಹಾಕುತ್ತಿದ್ದಾರೆ. ಇದರ ಜೊತೆಗೆ ಪ್ರವಾಸೋದ್ಯಮ ವ್ಯವಹಾರ ನಿಲ್ಲಿಸಿದರೆ ಟರ್ಕಿಗೆ ಅರಿವಾಗಲಿದೆ ಭಾರತದ ಶಕ್ತಿ ಎನ್ನುತ್ತಿದ್ದಾರೆ ಭಾರತದ ಜನತೆ.