25 October 2026 |

ಸುಳ್ಯದಲ್ಲಿ ಲಾರಿ–ಕಾರು ಭೀಕರ ಅಪಘಾತ: ಬಾಲಕ ಸಾವು, ಹಲವರಿಗೆ ಗಂಭೀರ ಗಾಯ

  • 25 Oct 2026 10:55:39 AM

ಸುಳ್ಯ: ತಾಲೂಕಿನ ಗೂನಡ್ಕ ಶಾಲೆಯ ತಿರುವಿನ ಬಳಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

 

ಸುಳ್ಯದಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಲಾರಿ ಗೂನಡ್ಕ ಶಾಲೆಯ ತಿರುವಿನ ಸಮೀಪ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಬಾಲಕ ಮೃತಪಟ್ಟಿದ್ದು, ಇತರ ಪ್ರಯಾಣಿಕರಿಗೂ ಗಾಯಗಳಾಗಿವೆ.

 

ಅಪಘಾತದ ಮಾಹಿತಿ ತಿಳಿದ ತಕ್ಷಣ ಗಾಯಾಳುಗಳನ್ನು ಆಂಬುಲೆನ್ಸ್‌ಗಳ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

 

ಕಾರಿನಲ್ಲಿದ್ದವರು ಬಂಟ್ವಾಳ ತಾಲೂಕಿನ ಮೂಲದವರು ಎನ್ನಲಾಗಿದೆ. ಮೃತ ಬಾಲಕನ ಗುರುತು ಹಾಗೂ ಅಪಘಾತಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.