04 November 2026 |

ಸುಬ್ರಹ್ಮಣ್ಯ: ಎರಡು ವರ್ಷದ ಬಾಲಕನ ದಿಢೀರ್ ನಿಧನ

  • 31 Oct 2026 09:56:58 AM

ಸುಬ್ರಹ್ಮಣ್ಯ: ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಎರಡು ವರ್ಷದ ಬಾಲಕನೊಬ್ಬ ಅಕಾಲಿಕವಾಗಿ ಮೃತಪಟ್ಟ ಘಟನೆ ಅಕ್ಟೋಬರ್ 29ರಂದು ನಡೆದಿದೆ.

 

ಸುಬ್ರಹ್ಮಣ್ಯದ ಅನಿಲ್ ಮೊಂತೆರೊ ಮತ್ತು ಸವಿತಾ ದಂಪತಿಯ ಪುತ್ರ ಆಸ್ಟಿನ್ ಕಫದ ತೊಂದರೆಯಿಂದ ಬಳಲುತ್ತಿದ್ದನು. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 28ರಂದು ಆತನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರಿಂದ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದರಿಂದ ಮಗುವನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು.

 

ಅಕ್ಟೋಬರ್ 29ರ ಮುಂಜಾನೆ ಎಂದಿನಂತೆ ಎಚ್ಚರಗೊಂಡ ಆಸ್ಟಿನ್ ಸ್ವಲ್ಪ ಸಮಯ ಮನೆಯಲ್ಲೇ ಆಟವಾಡಿದ್ದನು. ಆದರೆ, ಕೆಲವೇ ಹೊತ್ತಿನಲ್ಲಿ ಅನಿರೀಕ್ಷಿತವಾಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

 

ಸುಬ್ರಹ್ಮಣ್ಯದಲ್ಲಿ ಕೋಳಿ ಫಾರಂ ಉದ್ಯಮ ನಡೆಸುತ್ತಿರುವ ಅನಿಲ್ ಮೊಂತೆರೊ ಅವರ ಪುತ್ರನಾಗಿದ್ದ ಆಸ್ಟಿನ್, ಇಬ್ಬರು ಅಣ್ಣಂದಿರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾನೆ. ಪುಟ್ಟ ಮಗುವಿನ ಅಕಾಲಿಕ ಸಾವು ಕುಟುಂಬಸ್ಥರು ಮತ್ತು ಬಂಧುಮಿತ್ರರಲ್ಲಿ ತೀವ್ರ ದುಃಖ ಮೂಡಿಸಿದೆ.