ಬೆಂಗಳೂರು, ಮೇ 15: ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ಸುದ್ದಿಯೊಂದು ಬಂದಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಸುಸ್ತಾದರೆ ಒಂದು 90ml ಹೊಡೆಯುವ, ಮನೆಯಲ್ಲಿ ಸಂತಸದ ಸಂಭ್ರಮದಲ್ಲಿ ಮದ್ಯ ಪಾರ್ಟಿ ಮಾಡುವ, ಜೀವನದಲ್ಲಿ ಬೇಸರವಾಗಿ ಆ ಬೇಸರವನ್ನು ನೀಗಿಸಲು ಪೆಗ್ ಹೊಡಿಯುವ ಅಥವಾ ಸಂತಸದ ಕ್ಷಣಗಳನ್ನು ಕಳೆಯಲು ಇಲ್ಲವೇ ಇನ್ನಿತರ ಯಾವುದೇ ಕಾರಣಕ್ಕೆ ಮದ್ಯವನ್ನು ಖರೀದಿಸುವವರು ತಮ್ಮ ಹಿಂದಿನ ಲೆಕ್ಕಕ್ಕಿಂತ ಹೆಚ್ಚಾಗಿ ಹಣ ಪಾವತಿಸಬೇಕಾಗಿದೆ.
ಇದೀಗ ಕರ್ನಾಟಕ ಸರಕಾರ ಬಿಯರ್ ಮತ್ತು ಐಎಂಎಲ್ ಬ್ರಾಂಡ್ ನ ಮೇಲಿನ ಅಬಕಾರಿ ಸುಂಕ ಹೆಚ್ಚಳವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಬಿಯರ್ ಮೇಲೆ ಹೆಚ್ಚಿನ 195% ರಿಂದ 200% ಅಬಕಾರಿ ಸುಂಕವನ್ನು ಸಿದ್ದರಾಮಯ್ಯ ಸರಕಾರ ಹೆಚ್ಚಿಸಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಇದು 4 ನೇ ಬಾರಿ ಮದ್ಯ ಪಾನೀಯಗಳ ಸುಂಕ ಸಿದ್ದರಾಮಯ್ಯ ಸರಕಾರ ಹೆಚ್ಚಳವಾಗುತ್ತಿರುವುದು ಮದ್ಯ ಖರೀದಿ ಮಾಡುವವರಿಗೆ ನುಂಗಲಾರದಂತಾಗಿದೆ.
ಈ ಸುಂಕ ಹೆಚ್ಚಳ ದಿಂದ ಕಡಿಮೆ ಬೆಲೆಯ ಐ ಎಂ ಎಲ್ ಬ್ರಾಂಡ್ ನ 180ml ಬಾಟಲಿ ಗರಿಷ್ಠ 15 ರಿಂದ 20 ರೂ. ವರೆಗೆ ಬೆಲೆ ಏರಿಕೆಯಾಗಲಿದೆ. ಈ ದರ ಮೇ 15 ಗುರುವಾರ ದಿಂದ ಜಾರಿಯಾಗಲಿದೆ. ಮದ್ಯಪ್ರಿಯರು ನಿನ್ನೆಯ ಬೆಲೆಯ ಲೆಕ್ಕಾಚಾರದಲ್ಲಿ ಮದ್ಯದ ಅಂಗಡಿಗೆ ಇಂದು ಹೋದರೆ, ನಿನ್ನೆಯ ಬೆಲೆ ಇವತ್ತು ಇರುವ ಸಾಧ್ಯತೆ ಕಡಿಮೆ ಇದೆ.