22 June 2026 |

ಬಂಟ್ವಾಳ : ಅಪ್ರಾಪ್ತ ಬಾಲಕರ ಕೈಯಲ್ಲಿ ಸ್ಕೂಟರ್ ಕೊಡುವ ಪೋಷಕರ ಗಮನಕ್ಕೆ - ದಂಡ ವಿಧಿಸಿದ ಬಂಟ್ವಾಳ ಸಂಚಾರ ಪೊಲೀಸ್

  • 08 Mar 2025 02:02:35 PM

ಬಂಟ್ವಾಳ, ಮಾರ್ಚ್ 08, 2025 : ಮಾರ್ಚ್ 5 ರಂದು ಬಂಟ್ವಾಳ ಸಂಚಾರ ಪೊಲೀಸರು 26,000 ರೂಪಾಯಿ ದಂಡ ವಿಧಿಸಿದ ಬೆನ್ನಲ್ಲೇ ಈಗ ಮತ್ತೊಂದು ದೊಡ್ಡ ಮೊತ್ತದ ದಂಡ ವಿಧಿಸಿದ ವಿಚಾರ ಪ್ರಕಟಣೆಯಾಗಿದೆ. ಪಾಣೆಮಂಗಳೂರು ಗೂಡಿನಬಳಿಯ ಸೈಯದ್ ಇಮ್ತಿಯಾಜ್ ಎನ್ನುವವರಿಗೆ ದಂಡ ವಿಧಿಸಲಾಗಿದೆ.

 

ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಅಪ್ರಾಪ್ತ ವಯಸ್ಕರ ಸ್ಕೂಟರ್ ಚಾಲನೆಯ ವಿರುದ್ಧ ಕಠಿಣ ಕ್ರಮಕ್ಕೆ ಇಳಿದಿದ್ದಾರೆ. ಇದೇ ಗುರುವಾರ ಮಾರ್ಚ್ 07 ರಂದು ಅಪ್ರಾಪ್ತ ವಯಸ್ಕ ಪುತ್ರನಿಗೆ ಸ್ಕೂಟರ್ ಕೊಟ್ಟ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲದ ಆದೇಶದಂತೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ತಂದೆಗೆ ರೂ. 26,500 ದಂಡ ವಿಧಿಸಿದ್ದಾರೆ.

 

ಡ್ರೈವಿಂಗ್ ಪರವಾನಿಗೆ ಹೊಂದದೆ ರೋಡಿಗೆ ಇಳಿಯೋದು ಬಹಳ ದೊಡ್ಡ ಅಪರಾಧ. ಪೋಷಕರು ಮತ್ತು ಮಕ್ಕಳಿಗೆ ಅರಿವು ಮೂಡಿಸಲು ಪೊಲೀಸ್ ಠಾಣೆಯಿ ಹಲವಾರು ಕಾರ್ಯಕ್ರಮಗಳು ನಡೆಸಿದರು ಕೂಡಾ ಪೋಷಕರು ಗಮನಕ್ಕೆ ತಗೊಳ್ಳದೆ ಅಪ್ರಾಪ್ತ ಮಕ್ಕಳಿಗೆ ಸ್ಕೂಟರ್ ಕೊಡುವುದರ ಮೂಲಕ ಅಪರಾಧವೆಸಗುತ್ತಾರೆ. ಆದ್ದರಿಂದ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲು ಬಂಟ್ವಾಳ ಸಂಚಾರ ಠಾಣೆಯ ಪೋಲಿಸರು ಸನ್ನದ್ಧರಾಗಿದ್ದಾರೆ.