12 June 2025 | Join group

ಬಂಟ್ವಾಳ ಕಂಬಳ 2025ರ ಫಲಿತಾಂಶದ ವಿವರ : ಇಲ್ಲಿದೆ ರಿಸಲ್ಟ್ ಲಿಸ್ಟ್

  • 09 Mar 2025 02:23:04 PM

ಬಂಟ್ವಾಳ, ಮಾರ್ಚ್ 09, 2025 : ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಕೂಡಿಬೈಲಿನಲ್ಲಿ 14 ನೇ ವರ್ಷದ ಮುಡೂರು - ಪಡೂರು ಜೋಡುಕರೆ ಕಂಬಳ ಬಹಳ ಅದ್ದೂರಿಯಾಗಿ ನಡೆದು ಇಂದು ಮದ್ಯಾಹ್ನದ ಹೊತ್ತಿಗೆ ವಿಜೃಂಭಣೆಯ ಕೋಣಗಳ ಫೈನಲ್ ಓಟದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

 

ದಿನಾಂಕ 08ನೇ ಮಾರ್ಚ್ 2025 ರ ಬೆಳಗ್ಗೆ 8.00 ಗೆ ಪ್ರಾರಂಭವಾದ ಬಂಟ್ವಾಳ ಕಂಬಳ 09ನೇ ತಾರೀಕಿನ ಮಧ್ಯಾಹ್ನ ಸುಮಾರು 2.45 ಗಂಟೆಗೆ ಬಹುಮಾನ ವಿತರಣೆ ಮೂಲಕ ಮುಕ್ತಾಯಗೊಳಿಸಲಾಯಿತು.

 

ಬಂಟ್ವಾಳ ಕಂಬಳದ ಗೌರವಾಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ, ಅಧ್ಯಕ್ಷರಾದ ಪಿಯುಸ್ ಎಲ್ ರೋಡ್ರಿಗಸ್ ಮತ್ತು ಕಾರ್ಯಾಧ್ಯಕ್ಷರಾದ ಚಂದ್ರ ಪ್ರಕಾಶ ಶೆಟ್ಟಿ ತುಂಬೆ, ಎಡ್ತೂರು ರಾಜೀವ ಶೆಟ್ಟಿ ಮತ್ತು ಸಂಚಾಲಕರಾಗಿರುವ ಬಿ. ಪದ್ಮಶೇಖರ್ ಜೈನ್, ಎಲ್ಲಾ ಪದಾಧಿಕಾರಿಗಳು, ಕೋಣದ ಯಜಮಾನರು, ತೀರ್ಪುಗಾರರು, ಕ್ರೀಡಾಭಿಮಾನಿಗಳು ಇವರೆಲ್ಲರ ಸಮ್ಮಿಲನದಲ್ಲಿ ಬಹಳ ವಿಜೃಂಭಣನೆಯಿಂದ ನಡೆಯಿತು.

 

ನಿನ್ನೆ ದಿನಾಂಕ 09 ಮಾರ್ಚ್ 2025, ದಿವಂಗತ ಆಲ್ಬರ್ಟ್ ಪಾಯ್ಸ್ ಕೂಡಿಬೈಲು ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಸೋಲೂರಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂಥೋನಿ ಚರ್ಚಿನ ಧರ್ಮಗುರು ರಾಬರ್ಟ್ ಡಿಸೋಜಾ ಮತ್ತು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮ ಪ್ರಸಾದ್ ಅಜಿಲ ಕಂಬಳದ ಉದ್ಘಾಟನೆಯನ್ನು ನೆರವೇರಿಸಿದ್ದರು.

 

14ನೇ ವರ್ಷದ ಬಂಟ್ವಾಳ ಮುಡೂರು - ಪಡೂರು ಜೋಡುಕರೆ ಕಂಬಳದ ಫಲಿತಾಂಶ ಈ ರೀತಿ ಇದೆ;

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆ ಹಲಗೆ: 10 ಜೊತೆ
ಅಡ್ಡಹಲಗೆ: 06 ಜೊತೆ 
ಹಗ್ಗ ಹಿರಿಯ: 20 ಜೊತೆ 
ನೇಗಿಲು ಹಿರಿಯ: 24 ಜೊತೆ 
ಹಗ್ಗ ಕಿರಿಯ: 22 ಜೊತೆ 
ನೇಗಿಲು ಕಿರಿಯ: 86 ಜೊತೆ 
ಒಟ್ಟು ಕೋಣಗಳ ಸಂಖ್ಯೆ: 168 ಜೊತೆ
••••••••••••••••••••••••••••••••••••••••••••••
ಕನೆ ಹಲಗೆ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ಬೀಯಪಾದೆ ಕೆರೆಕೋಡಿ ಗುತ್ತು ಶೇಖರ ಪೂಜಾರಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ (11.53)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೋ "ಎ" (12.62)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್
••••••••••••••••••••••••••••••••••••••••••••••
ಹಗ್ಗ ಹಿರಿಯ: 

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಬಿ" (11.48)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಎ" (11.55)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಲೊರೆಟ್ಟೋ ಮಹಲ್ ತೋಟ ಆನ್ಯ ಅವಿಲ್ ಮಿನೇಜಸ್ (11.68)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಸುರತ್ಕಲ್ ಖಂಡಿಗೆ ಕುಸುಮಾಕರ್ ಸುವರ್ಣ (11.77)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
••••••••••••••••••••••••••••••••••••••••••••••
ನೇಗಿಲು ಹಿರಿಯ: 

ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.25)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.41)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ದೂಜ ಅಭಿಮಾನಿ ಬಳಗ (11.80)
ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶೆಟ್ಟಿ (12.13)
ಓಡಿಸಿದವರು: ಬಾರಾಡಿ ನತೇಶ್