ಈ ಚಿತ್ರವನ್ನು ವಿವರಣೆಯ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ.
ಮಂಗಳೂರು : ಮಾರ್ಚ್ 12 ರಂದು, ಅದಾನಿ ಏರ್ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL), ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನಯಾನ ಸಚಿವಾಲಯದ (MoCA) ಡಿಜಿಯಾತ್ರ ಉಪಕ್ರಮಕ್ಕೆ ಸೇರಿಸಿಕೊಳ್ಳುವುದಾಗಿ ಘೋಷಿಸಿತು. ಇದರ ಜೊತೆಗೆ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇರಿಸಲಾಗಿದೆ.
ಡಿಜಿಯಾತ್ರ ಉಪಕ್ರಮವು ಪ್ರಯಾಣಿಕರಿಗೆ ಕಾಗದರಹಿತ ಮತ್ತು ತೊಂದರೆ ಮುಕ್ತ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ, ವಿಮಾನ ನಿಲ್ದಾಣಗಳಲ್ಲಿ ಸುಗಮ ಪ್ರವೇಶಕ್ಕಾಗಿ ಮುಖ ಗುರುತಿಸುವಿಕೆ (Facial Recognition ) ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.
ಆಗಸ್ಟ್ 15, 2023 ರಂದು ಮೊದಲಿಗೆ ದೇಶದ ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಮುಂಬೈ, ಅಹಮದಾಬಾದ್, ಜೈಪುರ, ಲಕ್ನೋ ಮತ್ತು ಗುವಾಹಟಿ. ಹೊಸದಾಗಿ ಸೇರಿಕೊಂಡ ಮಂಗಳೂರು ಮತ್ತು ತಿರುವನಂತಪುರ ವಿಮಾನ ಪ್ರಯಾಣಿಕರಿಗೆ ಅನುಕೂಲತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ತಂತ್ರಜ್ಞಾನವನ್ನು ತರಲಾಗಿದೆ ಎಂದು AAHL ಸಂಸ್ಥೆ ತಿಳಿಸಿದೆ.
ಡಿಜಿ ಯಾತ್ರಾ ಉಪಕರಣವನ್ನು ಬಳಸುವ ಯಾತ್ರಿಕರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈಗಾಗಲೇ ಕೆಲವು ಏರ್ಪೋರ್ಟ್ ನಲ್ಲಿ ಸುಮಾರು ಶೇ.37 ರಷ್ಟು ಬಳಕೆಯನ್ನು ಕಂಡಿದೆ. ಅನುಕೂಲತೆ ಮತ್ತು ವೇಗದ ಚೆಕ್ ಇನ್ ಪ್ರಕ್ರಿಯೆಗೆ ಇದು ತುಂಬಾ ಉಪಾಯಕಾರಿಯಾಗಿದೆ.
ಈ ಕ್ರಮದೊಂದಿಗೆ, AAHL ನ ಎಲ್ಲಾ ಏಳು ಸಕ್ರಿಯ ವಿಮಾನ ನಿಲ್ದಾಣಗಳು ಈಗ ಪ್ರಯಾಣಿಕರಿಗೆ ಸುಗಮ ಪ್ರಯಾಣ ಅನುಭವಕ್ಕಾಗಿ ಡಿಜಿಯಾತ್ರವನ್ನು ಬಳಸಿಕೊಳ್ಳುವ ಆಯ್ಕೆಯನ್ನು ಒದಗಿಸುತ್ತವೆ. ಭೌತಿಕ ದಾಖಲಾತಿಗಳ ಅಗತ್ಯವನ್ನು ತೆಗೆದುಹಾಕುವ ಹಾಕಲಿದೆ ಡಿಜಿ ಯಾತ್ರಾ ಉಪಕರಣ. ಪ್ರಯಾಣಿಕರು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಆನಂದಿಸಲಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣಕ್ಕಾಗಿ ಪ್ರತಿಷ್ಠಿತ ಏರ್ ಪೋರ್ಟ್ ಸರ್ವಿಸ್ ಕ್ವಾಲಿಟಿ (ASQ) ಪ್ರಶಸ್ತಿಯನ್ನು ಮಾರ್ಚ್ 2025 ರಂದು ಪಡೆದುಕೊಂಡಿದೆ.