22 June 2026 |

ಹಿರಿಯ ಕಾಂಗ್ರೆಸ್ ನಾಯಕ ನೋಣಯ್ಯ ಪೂಜಾರಿ ನಿಧನ

  • 17 Mar 2025 05:45:50 PM

ಬಂಟ್ವಾಳ : ಹಿರಿಯ ಕಾಂಗ್ರೆಸ್ ನಾಯಕ ನೋಣಯ್ಯ ಪೂಜಾರಿಯವರು ಭಾನುವಾರ 16 ಮಾರ್ಚ್ 2025 ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಅಮ್ಟೂರು ಗ್ರಾಮದ ರಾಯಪ್ಪಕೊಡಿಯಲ್ಲಿ ವಾಸಿಸುತ್ತಿದ್ದ ಇವರು ವೃದ್ಧಾಪ್ಯ ಸಂಬಂಧಿತ ಕಾಯಿಲೆಗಳಿಂದ ತನ್ನ ಕೊನೆಯ ಉಸಿರೆಳೆದರು.

 

ಅವರಿಗೆ 85 ವರ್ಷ ವಯಸಾಗಿತ್ತು. ಇವರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಂಟ್ವಾಳ ಭೂ ನ್ಯಾಯಮಂಡಳಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಬಂಟ್ವಾಳ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.

 

ನೋಣಯ್ಯ ಪೂಜಾರಿಯವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಬಹಳಷ್ಟು ವರ್ಷ ಪಕ್ಷ ಸಂಘಟನೆಗೆ ಶ್ರಮಿಸಿದ್ದರು. ಮೃತರು ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.