13 June 2025 | Join group

ರಾಜ್ಯದಲ್ಲಿ ಏಪ್ರಿಲ್ 1ರಿಂದ ವಾಹನಗಳ ಬೆಲೆ ಹೆಚ್ಚಳ: ಖರೀದಿದಾರರಿಗೆ ಮತ್ತೊಂದು ಹೊರೆ!

  • 26 Mar 2025 12:10:57 AM

 ಚಿತ್ರಗಳು ಕೇವಲ ವಿವರಣೆಗಾಗಿ ಮಾತ್ರ.

ಬೆಂಗಳೂರು : ಈಗಾಗಲೇ ಬೆಲೆ ಏರಿಕೆಯ ಬಿಸಿ ಕರ್ನಾಟಕದ ಜನತೆಗೆ ತಟ್ಟುತ್ತಿದೆ. ಏಪ್ರಿಲ್ ಒಂದರಿಂದ ವಾಹನದ ಬೆಲೆ ಏರಿಕೆಯಾಗುವುದರಿಂದ ಕರ್ನಾಟಕದ ಸಾರ್ವಜನಿಕರು ಮತ್ತೊಂದು ಆರ್ಥಿಕ ಹೊಡೆತಕ್ಕೆ ಸಿಲುಕಲಿದ್ದಾರೆ. ದಿನನಿತ್ಯದ ಅಗತ್ಯ ವಸ್ತುಗಳಿಗೆ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿರುವ ಬೆನ್ನಲೇ ಇನ್ನೊಂದು ಬೆಚ್ಚಿ ಬೀಳಿಸುವ ಬೆಲೆ ಏರಿಕೆ ಪಟ್ಟಿಗೆ ವಾಹನದ ದರ ಸೇರ್ಪಡೆಯಾಗಲಿದೆ.

 

ಕರ್ನಾಟಕದಲ್ಲಿ ವಾಹನಗಳ ಬೆಲೆ ಏರಿಕೆಗೆ ಕಾರಣ

ಉಕ್ಕು ಮತ್ತು ಬಿಡಿಭಾಗಗಳ ಆಮದು ವೆಚ್ಚಗಳು ಹೆಚ್ಚಾಗುವುದರಿಂದ, ವಾಹಗಳ ಬೆಲೆಗಳಲ್ಲಿ ಗಮನಾರ್ಹ ಏರಿಕೆಯಾಗಲಿದೆ. ಕರ್ನಾಟಕ ಸರಕಾರ ಸೆಸ್ ತೆರಿಗೆ ಹೆಚ್ಚಳವನ್ನು ಘೋಷಿಸಿದ್ದೇ ವಾಹನಗಳ ಬೆಲೆಗಳಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಲಿದೆ.

 

ಕೆಲ ವರ್ಗದ ಮತ್ತು ಆಟೋ ರಿಕ್ಷಾಕ್ಕೆ ಅಂದಾಜು ಎಷ್ಟು ಬೆಲೆಯೇರಿಕೆಯಲಾಗಿದೆ

ವಾಹನಗಳ ಬೆಲೆಗಳು ಗಣನೀಯವಾಗಿ ಶೇ.3 ರಿಂದ ಶೇ.4 ರಷ್ಟು ಏರಿಕೆಯಾಗಲಿದೆ. ಬಹಳಷ್ಟು ವಾಹನಗಳಿಗೆ ಕನಿಷ್ಠ ರೂ.3,000 ಜಾಸ್ತಿಯಾದರೆ, ಆಟೋರಿಕ್ಷಾ ಬೆಲೆಯಲ್ಲಿ ರೂ. 5,000 ರಷ್ಟು ಹೆಚ್ಚಾಗಬಹುದು. ಈ ಬೆಲೆಯೇರಿಕೆ ದಿನನಿತ್ಯ ದುಡಿದು ತಿನ್ನುವ ಆಟೋರಿಕ್ಷಾ ಮಾಲಕ ಚಾಲಕರಿಗೆ ಭಾರಿ ಪೆಟ್ಟು ಬೀಳಲಿದೆ.

ಕಾರಿಗೆ ಅಂದಾಜು ಎಷ್ಟು ಬೆಲೆಯೇರಿಕೆಯಾಗಲಿದೆ

ಕಾರುಗಳ ಬೆಲೆಯೂ ಸುಮಾರು ಶೇ.2 ರಿಂದ ಶೇ.3 ರಷ್ಟು ಏರಿಕೆಯಾಗಲಿದೆ. 3% ಪ್ರಕಾರ ತೆಗೆದುಕೊಂಡರೆ, ಪ್ರತಿ 1 ಲಕ್ಷಕ್ಕೆ ರೂ.3,000 ದಷ್ಟು ಹೆಚ್ಚು ಕಟ್ಟಬೇಕಾಗುತ್ತದೆ. 10 ಲಕ್ಷದ ಕಾರು ನಿಮಗೆ 10,30,000 ದಷ್ಟು ಬರುವ ಸಾಧ್ಯತೆ ಇದೆ. ಈ ಅಂಕಿ ಅಂಶ ಕೇವಲ ವಿವರಣೆ ಉದ್ದೇಶದಿಂದ ತೋರಿಸಲಾಗಿದೆ.

 

ದ್ವಿಚಕ್ರ ವಾಹನಗಳಿಗೂ ಬೆಲೆಯೇರಿಕೆಯ ಬಿಸಿ ತಟ್ಟಲಿದೆ. ಪ್ರಸ್ತುತ, ಆಟೋ ಬೆಲೆ ರೂ.2,73,000 ಆಗಿದ್ದು, ಈ ಬೆಲೆ ಏರಿಕೆಯಾದ ನಂತರ ಇದು ರೂ.2,78,000 ಯಷ್ಟು ಆಗಲಿದೆ. ಈ ಬೆಲೆಯೇರಿಕೆಯಿಂದ ವಾಹನ ಖರೀದಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

 

ಈಗಾಗಲೇ ಬೆಲೆಯೇರಿಕೆಯ ಬಿಸಿ ತಟ್ಟಿರುವ ಜನತೆ, ವಾಹನ ಖರೀದಿಯನ್ನು ವಿಳಂಬ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಿಂದ ರಾಜ್ಯಕ್ಕೆ ಬರುವ ಆದಾಯದಲ್ಲೂ ಪರಿಣಾಮ ಬೀರಲಿದೆ. ಸೆಕೆಂಡ್ ಹ್ಯಾಂಡ್ ವಾಹನ ವ್ಯಾಪಾರಿಗಳು ಸಹ ಬಳಸಿದ ಕಾರಿನ ಬೆಲೆ ಜಾಸ್ತಿ ಮಾಡುವ ಸಂಭಾವನೆ ಇದೆ.