24 October 2025 | Join group

ಬೆಂಗಳೂರಲ್ಲಿ ಲವ್ ಜಿಹಾದ್ ಆರೋಪ : ಹಿಂದೂ ಯುವತಿಗೆ ಲವ್ ಸೆಕ್ಸ್ ದೋಖಾ : ದೂರು ದಾಖಲು.!

  • 23 Oct 2025 04:02:03 PM

ಬೆಂಗಳೂರು : ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಗೆ ಲವ್ ಸೆಕ್ಸ್ ದೋಖಾ ಎಸಗಿರುವ ಆರೋಪ ಕೇಳಿಬಂದಿದ್ದು, ಪ್ರಿಯಕರ ಮಹಮ್ಮದ್ ಇಶಾಕ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

 

ಯುವತಿ ಹೆಚ್ ಎಸ್ ಆರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತನಿಗೆ ಈಗ ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ನಡೆದಿದ್ದು, ಇದೀಗ ಲವ್ ಜಿಹಾದ್ ಆರೋಪ ಕೇಳಿಬಂದಿದೆ.

 

ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಇಶಾಕ್ ನನ್ನು ಯುವತಿ ಪ್ರೀತಿ ಮಾಡುತ್ತಿದ್ದಳು.

 

ಯುವತಿಯನ್ನು ಫುಸಲಾಯಿಸಿ ಆತ ಲಾಡ್ಜ್ ಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಇಬ್ಬರೂ ಪರಸ್ಪರ ಒಪ್ಪಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಬಳಿಕ ಯುವತಿ ಮದುವೆಯಾಗುವಂತೆ ಕೇಳಿದ್ದಾಳೆ. ಆದರೆ ಆತ ಒಪ್ಪದೇ ಹಲವು ನೆಪ ಹೇಳಿ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ನಿನ್ನನ್ನು ಮದುವೆ ಆಗಬೇಕೆಂದರೆ ನೀನು ಮತಾಂತರವಾಗಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಹೆಚ್ ಎಸ್ ಆರ್ ಠಾಣೆಗೆ ದೂರು ನೀಡಿದ್ದಾಳೆ.