09 August 2026 |

ಸೇಂಟ್ ಲೂಯಿಸ್ ಚೆಸ್ ಟೂರ್ನಿ: ಪ್ರಜ್ಞಾನಂದಗೆ ಚಾಂಪಿಯನ್ ಪಟ್ಟ

  • 08 Aug 2026 08:53:32 PM

ಸೇಂಟ್ ಲೂಯಿಸ್ (ಅಮೆರಿಕ): ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ನಡೆದ ರ್ಯಾಪಿಡ್ ಆ್ಯಂಡ್ ಬ್ಲಿಟ್ಸ್ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿದ್ದಾರೆ. 

 

ಈ ಗೆಲುವಿನ ಮೂಲಕ ಸೇಂಟ್ ಲೂಯಿಸ್ ಚೆಸ್ ಟೂರ್ನಿಯಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

 

ರ್ಯಾಪಿಡ್ ಹಾಗೂ ಬ್ಲಿಟ್ಸ್ ವಿಭಾಗಗಳ ಒಟ್ಟು ಫಲಿತಾಂಶದಲ್ಲಿ ಪ್ರಜ್ಞಾನಂದ 23.5 ಅಂಕಗಳನ್ನು ಕಲೆಹಾಕಿದರು. 

 

22 ಅಂಕಗಳೊಂದಿಗೆ ಉಜ್ಬೇಕಿಸ್ತಾನದ ಜಾವೊಖೀರ್ ಸಿಂದರೋವ್ ರನ್ನರ್‌ಅಪ್ ಸ್ಥಾನ ಪಡೆದರು.

 

ಅಮೆರಿಕದ ವೆಸ್ಲಿ ಸೋ 20.5 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.