09 June 2025 | Join group

ವಿನೋದ್ ಕಾಂಬ್ಳಿಗೆ ತಿಂಗಳ ಖರ್ಚಿಗೆ ನೆರವು ನೀಡುತ್ತಿರುವವರು ಬೇರೆ ಯಾರು ಅಲ್ಲ, ಮಾಜಿ ಖ್ಯಾತ ಕ್ರಿಕೆಟಿಗ

  • 01 May 2025 08:50:00 PM

Vinod Kambli, May 01 : ಜೀವನದಲ್ಲಿ ಸಾಧನೆಗಳ ಶಿಖರವನ್ನು ತಲುಪುವಾಗ ಶಿಸ್ತು ಬೆಳೆಸಿಕೊಳ್ಳದಿದ್ದರೆ, ಬದುಕುವುದೂ ಕಷ್ಟ, ಸಾಧನೆ ಮಾಡುವುದು ಕಷ್ಟ ಎಂಬುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಉತ್ತಮ ಉದಾಹರಣೆ. ಭಾರತಕ್ಕೆ ನೂರಕ್ಕಿಂದ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಕಾಂಬ್ಳಿ ಅಂದಿನ ಬೆಸ್ಟ್ ಹಿಟ್ಟಿಂಗ್ ಬ್ಯಾಟ್ಸಮನ್ ಆಗಿದ್ದರು.

 

ಆರೋಗ್ಯದ ಸಮಸ್ಯೆ

ಕಳೆದ ಜನವರಿಯಲ್ಲಿ, ಥಾಣೆಯ ಅಕೃತಿ ಆಸ್ಪತ್ರೆಗೆ ತೆರಳಿದ್ದ ಕಾಂಬ್ಳಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿಕೆ ಮತ್ತು ಮೂತ್ರದ ಸೋಂಕು ಇರುವುದು ಪತ್ತೆಯಾಯಿತು. ಶರೀರದ ದೌರ್ಬಲ್ಯದಿಂದ ನಡೆಯಲು ಕಷ್ಟಪಡುತ್ತಿದ್ದಾರೆ.

 

ಕೆಟ್ಟ ಚಟಗಳಿಂದ ಅರೋಗ್ಯ ಮತ್ತು ಕ್ರಿಕೆಟ್ ಗೆ ಕುತ್ತು

ಮೂಲಗಳ ಪ್ರಕಾರ ವಿನೋದ್ ಕಾಂಬ್ಳಿಯ ಅತಿಯಾದ ಮದ್ಯ ಸೇವನೆ ಆರೋಗ್ಯದ ಮೇಲೆ ಬಹಳ ದೊಡ್ಡ ಪರಿಮಾಣ ಬೀರಿದ್ದೆ ಅಲ್ಲದೆ, ಲೇಟ್ ನೈಟ್ ಪಾರ್ಟಿ ಗಳು ಸಹ ಇವರ ಕ್ರಿಕೆಟ್ ಜೀವನವನ್ನೇ ಮುಗಿಸಿದೆ ಎಂದು ಹೇಳಲಾಗಿದೆ.

 

ಸುನಿಲ್ ಗವಾಸ್ಕರ್ ರವರ CHAMPS ಫೌಂಡೇಶನ್‌ನಿಂದ ನೆರವು

ಟೈಮ್ಸ್ ಆಫ್ ಇಂಡಿಯಾ (TOI) ವರದಿ ಪ್ರಕಾರ, ವಿನೋದ್ ಕಾಂಬ್ಳಿಗೆ ಬಿಸಿಸಿಐ ವತಿಯಿಂದ ರೂ. 30,000 ಪಿಂಚಣಿ ದೊರೆಯುತ್ತಿದೆ. ಇದೀಗ ಸುನಿಲ್ ಗಾವಸ್ಕರ್ CHAMPS Foundation ನಿಂದ ಹೆಚ್ಚಿನ 30,000 ರೂ. ಸಹಾಯಧನ ನೀಡುವುದಾಗಿ ತಿಳಿಸಿದ್ದು, ಕಾಂಬ್ಳಿ ಯವರ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.

 

ಕಾಂಬ್ಳಿಯ ಕ್ರಿಕೆಟ್ ಜಗತ್ತಿನ ಸಾಧನೆಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ದ್ವಿಶತಕ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿರುವ ವಿನೋದ್ ಕಾಂಬ್ಳಿ 17 ಟೆಸ್ಟ್‌ಗಳ ಮತ್ತು 104 ಏಕದಿನ ಪಂದ್ಯಗಳಲ್ಲಿ ಆಡಿರುತ್ತಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 3000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಅವರು ಕ್ರಮವಾಗಿ 224 ಮತ್ತು 227 ರನ್ ಗಳಿಸಿದರೆ ಕೀರ್ತಿ ಇವರಿಗೆ ಸಲ್ಲುತ್ತದೆ.