ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಆಟಗಾರ. ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದರೆ ಕೋಟಿಗಟ್ಟಲೆ ಹಣ ಗಳಿಸುವ ಈ ಆಟಗಾರ ಬೇರೆಯವರ ಫೋಟೋ ಗೆ ಒಂದು ಲೈಕ್ ಕೊಟ್ಟರೆ ಹೇಗಿರಬಹುದು ನೀವೇ ಊಹಿಸಿ.
ಹೌದು, ವಿರಾಟ್ ಕೊಹ್ಲಿ ತಿಳಿಯದೆ ಈ ತಪ್ಪು ಮಾಡಿದ್ದಾರಂತೆ. ಬಾಲಿವುಡ್ ನಟಿ ಅವನೀತ್ ಕೌರ್ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಫೋಟೋಗೆ ವಿರಾಟ್ ಕೊಹ್ಲಿ ಲೈಕ್ ಕೊಟ್ಟಿರೋದು ಈಗ ಭಾರಿ ಸುದ್ದಿಯನ್ನು ಮಾಡುತ್ತಿದೆ. ಇದರಿಂದಾಗಿ ಅವನೀತ್ ಕೌರ್ ಹೆಸರು ರಾರಾಜಿಸಲಾರಂಭಿಸಿದೆ.
ವಿರಾಟ್ ಮಾಡಿದ ತಪ್ಪಾದರೂ ಏನು ?
23 ವರ್ಷ ಪ್ರಾಯದ ಬಾಲಿವುಡ್ ನಟಿ ಅವನೀತ್ ಕೌರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವಾರು ಭಂಗಿಯ ಫೋಟೋಗಳನ್ನು ಹಾಕಿದ್ದರು. ಈ ಫೋಟೋಗೆ ವಿರಾಟ್ ಕೊಹ್ಲಿ ಲೈಕ್ ಕೊಟ್ಟಿದ್ದಾರೆ ಮತ್ತು ಇದರ ಸ್ಕ್ರೀನ್ ಶಾಟ್ ತೆಗೆದು ಅಭಿಮಾನಿಗಳು ವೈರಲ್ ಮಾಡಿಯೇ ಬಿಟ್ಟರು.
ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕುವುದಾಗಲಿ, ಲೈಕ್ ಬಟನ್ ಒತ್ತುವುದಕ್ಕೆ ಹಿಂದೇಟು ಹಾಕುತ್ತಿದ್ದು, ಇದೀಗ ಅವನೀತ್ ಕೌರ್ ನ ಬೋಲ್ಡ್ ಫೋಟೋಗೆ ವಿರಾಟ್ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂಬ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಕಿಂಗ್ ಕೊಹ್ಲಿಯಿಂದ ಸ್ಪಷ್ಟನೆ
ನನ್ನ ಫೀಡ್ ನ್ನು ತೆರವುಗೊಳಿಸುವ ಸಂದರ್ಭದಲ್ಲಿ ತಪ್ಪಾಗಿ ಅವನೀತ್ ಕೌರ್ ರವರ ಫೋಟೋ ಗೆ ಕ್ಲಿಕ್ ಆಗಿರಬಹುದು ಹೊರತು ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ವಿರಾಟ್ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ, ನೀವು ಅರ್ಥಮಾಡಿಕೊಳ್ಳುವಿರೆಂದು ಭಾವಿಸುತ್ತೇನೆ, ಧನ್ಯವಾದಗಳು ಎಂದು ಇನ್ಸ್ಟಾಗ್ರಾಮ್ ಹಾಕಿದ್ದಾರೆ.
ಅವನೀತ್ ಕೌರ್ ಗೆ ಪುಕ್ಸಟೆ ಪಬ್ಲಿಸಿಟಿ
ವಿರಾಟ್ ಕೊಹ್ಲಿಯ ಒಂದು ಲೈಕ್ ನಿಂದ ಅವನೀತ್ ಕೌರ್ ಗೆ ಪುಕ್ಸಟೆ ಪಬ್ಲಿಸಿಟಿ ದೊರೆತಿದೆ. ಯುವ ನಟಿಯ ಭವಿಷ್ಯ ಬದಲಾಗುವ ಸಾಧ್ಯತೆಯನ್ನು ತಿರಸ್ಕರಿಸುವಂತಿಲ್ಲ. ಸಕತ್ ಸುದ್ದಿಯಲ್ಲಿರುವ ಅವನೀತ್ ಕೌರ್ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ಕೂಡ ಜೋರಾಗಿದೆ.