16 June 2025 | Join group

ರೊಮಾರಿಯೋ ರುದ್ರಾವತಾರ, ಆರ್​ಸಿಬಿಗೆ ಸಿಎಸ್​ಕೆ ಎದುರು ಕೊನೆಯ ಓವರ್ ನಲ್ಲಿ ಜಯ

  • 04 May 2025 12:59:57 AM

ಬೆಂಗಳೂರು, ಮೇ 04: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ ತಂಡವನ್ನು 2 ರನ್ ಗಳಿಂದ ಸೋಲಿಸುವ ಮೂಲಕ ಐಪಿಎಲ್ ರಾಂಕಿಂಗ್ ನಲ್ಲಿ ಸದ್ಯಕ್ಕೆ ಪ್ರಥಮ ಸ್ಥಾನಕ್ಕೆ ಏರಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ ಆರ್​ಸಿಬಿ 213 ರನ್ ಒಟ್ಟುಗೂಡಿಸಿತ್ತು. ಇದನ್ನು ಬೆನ್ನಟ್ಟಿದ ಸಿಎಸ್​ಕೆ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಕೊನೆಯ ಓವರ್ ನ ಕೊನೆಯ ಬಾಲ್ ನಲ್ಲಿ ಎಡವಿತ್ತು.

 

ಮಿಂಚಿದ ಓಪನಿಂಗ್ ಬ್ಯಾಟಿಂಗ್

ಓಪನಿಂಗ್ ಬ್ಯಾಟಿಂಗ್ ಗೆ ಕಣಕ್ಕೆ ಇಳಿದ ವಿರಾಟ್ ಕೊಹ್ಲಿ ಮತ್ತು ಬೆಥೆಲ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗಟ್ಟಿಯಾದ ಅಡಿಪಾಯ ಹಾಕಿ ಕೊಟ್ಟರು. ಜಾಕೋಬ್ ಬೆಥೆಲ್ 33 ಬಾಲ್ ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 55 ರನ್ ಹೊಡೆದರು. ಕೊಹ್ಲಿ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 5 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿ 33 ಬಾಲ್ ಗಳಲ್ಲಿ 62 ರನ್ ಬಾರಿಸಿದರು.

 

ರೋಮಾಂಚನಕಾರಿ ಬ್ಯಾಟಿಂಗ್ ಮಾಡಿದ ರೊಮಾರಿಯೋ ಶೆಫರ್ಡ್

ರೊಮಾರಿಯೋ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರುದ್ರಾವತಾರವನ್ನೇ ತೋರಿಸಿದರು. ಕೇವಲ 14 ಬಾಲ್ ಗಳಲ್ಲಿ 53 ರನ್ ಬಾರಿಸಿ ಐಪಿಎಲ್ ನಲ್ಲಿ ವೇಗದ ಅರ್ಧ ಶತಕ ಬಾರಿಸಿದ್ದಾರೆ. 19 ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಅವರ ಓವರ್ ನಲ್ಲಿ ಶೆಫರ್ಡ್ 4 ಸಿಕ್ಸರ್‌ ಮತ್ತು 2 ಬೌಂಡರಿಗಳನ್ನು ಬಾರಿಸುವ ಮೂಲಕ 33 ರನ್ ಗಳಿಸಿದರು.

 

18 ಓವರ್ ವರೆಗೆ 159 ರನ್, 20 ನೇ ಓವರ್ ಗೆ 213 ರನ್

ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಜತ್ ಪಡೆ, ಬೆಥೆಲ್ ಮತ್ತು ಕೊಹ್ಲಿ ವಿಕೆಟ್ ಉರಿದ ನಂತರ ಸ್ಕೋರ್ ಬೋರ್ಡ್ ನಲ್ಲಿ ರನ್ ತುಂಬಾ ಇಳಿಮುಖವಾಗಿತ್ತು. ಒಂದು ಹಂತದಲ್ಲಿ 160 ರ ಗಡಿ ದಾಟುವುದು ಕಷ್ಟವೆನಿಸಿತ್ತು. 18 ಓವರ್ ವರೆಗೆ ಆರ್​ಸಿಬಿ 159 ರನ್ ಕಲೆಹಾಕಿತ್ತು. ಆಮೇಲೆ ಕ್ರೀಸಿಗೆ ಇಳಿದ ರೋಮರಿಯೋ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಕೊನೆಗೆ ಆರ್​ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತ್ತು.

 

ಕೊನೆಯ ಓವರ್ ತನಕ ಹೋರಾಟ ನಡೆಸಿದ ಸಿಎಸ್​ಕೆ

ಆರ್​ಸಿಬಿ ಒಟ್ಟು ಮೊತ್ತವನ್ನು ಬೆನ್ನು ಹತ್ತಿದ ಸಿಎಸ್​ಕೆ, 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ಕೇವಲ 2 ರನ್ ನ ಹಂತರದಲ್ಲಿ ತನ್ನ ಸೋಲನ್ನು ಒಪ್ಪಿಕೊಂಡಿತ್ತು. ಸಿಎಸ್​ಕೆ ಪರ ಆಯುಷ್ ಮತ್ತು ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಆಯುಷ್ 48 ಬಾಲ್ ಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಗಳ ನೆರವಿನಿಂದ 94 ರನ್ ಹೊಡೆದರೆ, ರವೀಂದ್ರ ಜಡೇಜಾ 45 ಎಸೆತಗಳಲ್ಲಿ ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 77 ರನ್ ಒಟ್ಟುಗೂಡಿಸಿದರು. ಕೊನೆಗೆ ಆರ್​ಸಿಬಿ ಈ ಪಂದ್ಯವನ್ನು ಜಯಿಸುವುದರ ಮೂಲಕ ಐಪಿಎಲ್ ರಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದೆ.