04 June 2025 | Join group

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆಗೆ ನಿರ್ಧಾರ : ಬಿಸಿಸಿಐ ಪುನರ್ ವಿಮರ್ಶಿಸಲು ಸೂಚನೆ

  • 10 May 2025 01:40:29 PM

Indian Cricket, May 10: ಭಾರತದ ಟೆಸ್ಟ್ ಕ್ರಿಕೆಟ್ ಪಂದ್ಯಾಟದಿಂದ ನಿವೃತ್ತಿಯಾಗಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಕೆಳ ದಿನಗಳ ಹಿಂದೆ ಭಾರತದ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಪಂದ್ಯಗಳಿಂದ ದೂರ ಇರಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಬಾಂಗ್ಲಾದೇಶ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಈ ದೇಶಗಳ ನಡುವೆ ನಡೆದ ಪಂದ್ಯಗಳಲ್ಲಿ ವಿಫಲವಾದ ನಂತರ ಕೆಲ ದಿನಗಳ ಹಿಂದೆ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಿದ್ದಾರೆ.

 

ಇದೀಗ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

 

ಇಂಡಿಯನ್ ಟೈಮ್ಸ್ ವರದಿ ಪ್ರಕಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿಯಾಗುವುದಾಗಿ ಬಿಸಿಸಿಐ ತಿಳಿಸಿದ್ದಾರೆ ಮತ್ತು ಬಿಸಿಸಿಐ ಈ ನಿರ್ಧಾರವನ್ನು ಪುನರ್ ವಿಮರ್ಶಿಸುವಂತೆ ತಿಳಿಸಿದೆ ಎಂದು ವರದಿಯಾಗಿದೆ.

 

ಈಗಾಗಲೇ 2025 ರ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ರಾಯಲ್ಸ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಕಳೆದ ಬಾರಿ ನಡೆದ ಟೆಸ್ಟ್ ಪಂದ್ಯಗಳ ನಂತರ ಈ ರೀತಿಯ ನಿರ್ಧಾರದ ಬಗ್ಗೆ ಯೋಚಿಸಿದ್ದಾರೆ ಎಂದು ತಿಳಿದುಬಂದಿದೆ.

 

ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಸಲುವಾಗಿ ಟೆಸ್ಟ್ ಪಂದ್ಯಾಟಗಳಿಗೆ ನಿವೃತ್ತಿಯನ್ನು ಘೋಷಿಸಿದ್ದೇನೆ ಎಂದು ರೋಹಿತ್ ಶರ್ಮ ತನ್ನ ನಿವೃತ್ತಿ ಘೋಷಣೆಯ ನಂತರ ತಿಳಿಸಿದ್ದರು ಆದರೆ ಏಕದಿನ ಪಂದ್ಯಗಳ ತಂಡದ ನಾಯಕನಾಗುವ ಬಯಕೆಯಿಂದ ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

 

ಮುಂದಿನ ತಿಂಗಳು ಇಂಗ್ಲೆಂಡ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳ ಮುನ್ನ ಈ ಎರಡು ದಿಗ್ಗಜ ಅನುಭವಿ ಆಟಗಾರರು ನಿವೃತ್ತಿಯಾಗುವುದು ಬಿಸಿಸಿಐ ಸೆಲೆಕ್ಷನ್ ಬೋರ್ಡ್ ಗೆ ಸ್ವಲ್ಪ ಮಟ್ಟದ ತಲೆಬಿಸಿಯಾಗಿ ಪರಿಣಮಿಸಲಿದೆ.