ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮೇ 12 ರ ಸೋಮವಾರ ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ಕಾಲ ಭಾರತ ತಂಡಕ್ಕೆ ಟೆಸ್ಟ್ ಪಂದ್ಯಗಳನ್ನು ಆಡಿದ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕುವದರ ಮೂಲಕ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
123 ಟೆಸ್ಟ್‌ಗಳಲ್ಲಿ, ಅವರು 30 ಶತಕಗಳು ಸೇರಿದಂತೆ 46.85 ರ ಸರಾಸರಿಯಲ್ಲಿ 9,230 ರನ್‌ಗಳನ್ನು ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ, ಭಾರತವು 68 ಟೆಸ್ಟ್‌ಗಳಲ್ಲಿ 40 ಗೆದ್ದಿದೆ, ಇದು ಅವರನ್ನು ದೇಶದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನನ್ನಾಗಿ ಮಾಡಿದೆ ಮತ್ತು ವಿರಾಟ್ ಕೊಹ್ಲಿ ಸ್ವತಃ ಬಹಳಷ್ಟು ದಾಖಲೆಗಳನ್ನು ಬರೆದಿದ್ದಾರೆ.
“ನಾನು ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಈ ರೀತಿಯ ಪ್ರಯಾಣವನ್ನಾಗಿಸಲಿದೆ ಎಂದು ನಾನು ಯಾವಾಗಲು ಊಹಿಸಿರಲಿಲ್ಲ” ಎಂದು ಕೊಹ್ಲಿ ಬರೆದಿದ್ದಾರೆ. “ಇದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನಾನು ಜೀವನಪರ್ಯಂತ ಸಾಗಿಸುವ ಪಾಠಗಳನ್ನು ಕಲಿಸಿತು.”
ಇದನ್ನೂ ಓದಿ : ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆಗೆ ನಿರ್ಧಾರ : ಬಿಸಿಸಿಐ ಪುನರ್ ವಿಮರ್ಶಿಸಲು ಸೂಚನೆ
ಕೊಹ್ಲಿ ಈ ನಿರ್ಧಾರ ಇಂಗ್ಲೆಂಡ್ ಪ್ರವಾಸ ಸಮೀಪಿಸುತ್ತಿರುವಾಗ ಆಗಿದ್ದು, ಈ ನಿರ್ಧಾರವು ಕ್ರಿಕೆಟ್ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಪಡೆದಿದೆ ಮತ್ತು ಬಹಳಷ್ಟು ಕ್ರಿಕೆಟ್ ಪ್ರಿಯರಿಗೆ ನಿರಾಶಾದಾಯಕವಾಗಿದೆ.
ಈ ವರ್ಷದಲ್ಲಿ 1 ಕೋಟಿಗಿಂತ ಹೆಚ್ಚಿನ ಆದಾಯ ಗಳಿಸಬಹುದಿತ್ತು
ಮೂಲಗಳ ಪ್ರಕಾರ, ಬಿಸಿಸಿಐ ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರನಿಗೆ 15 ಲಕ್ಷ ರೂ. ಪ್ರತಿ ಪಂದ್ಯಕ್ಕೆ ಶುಲ್ಕದ ರೀತಿಯಲ್ಲಿ ನೀಡುತ್ತದೆ. ಈ ವರ್ಷ 2025ರಲ್ಲಿ ಇನ್ನೂ ಒಟ್ಟು 9 ಟೆಸ್ಟ್ ಮ್ಯಾಚ್ ಗಳು ಬಾಕಿ ಇರುವುದರಿಂದ ಒಟ್ಟು 1 ಕೋಟಿ 35 ಲಕ್ಷ ರೂ. ಗಳಷ್ಟು ಪಡೆಯಲಿದ್ದಾರೆ. ಆದರೆ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯದಿಂದ ನಿವೃತ್ತಿ ಘೋಷಿಸಿದ ಪರಿಣಾಮ ಈ ಹಣವನ್ನು ಪಡೆಯುವುದಿಲ್ಲ.
ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದ ನಂತರ, ಭಾರತದ ಮುಂದಿನ ಟೆಸ್ಟ್ ನಾಯಕನ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ವಿರಾಟ್ ಕೊಹ್ಲಿಯಲ್ಲಿರುವ ಉತ್ಸವ, ತೀವ್ರತೆ ಮತ್ತು ಕ್ರಿಕೆಟ್ ಗಿರುವ ಬದ್ಧತೆ ಹಲವಾರು ಯುವಕರನ್ನು ಪ್ರೋತ್ಸಾಹಿಸುತ್ತದೆ. ತಂಡದಲ್ಲಿ ಉಮ್ಮಸ್ಸು ಬರಲು ಕಿಂಗ್ ಕೊಹ್ಲಿಯಂತಹ ಆಟಗಾರ ಯಾವಾಗಲು ಇರಬೇಕು ಎಂದು ಕ್ರಿಕೆಟ್ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.