18 June 2025 | Join group

ಇತಿಹಾಸ ಸೃಷ್ಟಿಸಿದ ಭಾರತದ ಮಹಿಳಾ ಬಾಡಿಬಿಲ್ಡರ್ : ಈ ಸಾಧನೆ ಮಾಡಿದ ಮೊದಲ ಮಹಿಳಾ ಅಥ್ಲೀಟ್

  • 16 Jun 2025 09:04:40 PM

ಅರುಣಾಚಲ ಪ್ರದೇಶದ ಮಹಿಳಾ ಬಾಡಿಬಿಲ್ಡರ್ ಹಿಲಾಂಗ್ ಯಾಜಿಕ್ (25) ಇತಿಹಾಸ ಸೃಷ್ಟಿಸಿದ್ದಾರೆ. ಭೂತಾನ್ ನಲ್ಲಿ ನಡೆದ 15ನೇ ದಕ್ಷಿಣ ಏಷ್ಯಾ ಬಾಡಿಬಿಲ್ಡಿಂಗ್ ಚಿನ್ನದ ಪದಕವನ್ನು ಗಳಿಸಿದ್ದಾರೆ.

 

ಹಿಲಾಂಗ್ ಯಾಜಿಕ್ ಫಿಜಿಕ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕವನ್ನು ಕೂಡಾ ಗೆದ್ದಿದ್ದಾರೆ. ಇವರ ಸಮರ್ಪಣೆ, ದೃಢನಿಶ್ಚಯ ಮತ್ತು ಶಿಸ್ತುಗೆ ಸಂದ ಪ್ರತಿಫಲ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ಅರುಣಾಚಲ ಪ್ರದೇಶ ರಾಜ್ಯದ ಮೊದಲ ಮಹಿಳಾ ಅಥ್ಲೆಟಿಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಾಜಿಕ್ ಕಳೆದ ವರ್ಷ ಕೂಡ ಏಷ್ಯನ್ ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

 

ಇದೀಗ ಇಡೀ ಅರುಣಾಚಲ ಪ್ರದೇಶ ಮತ್ತು ಭಾರತೀಯರು ಹಿಲಾಂಗ್ ಯಾಜಿಕ್ ರವರ ಸಾಧನೆಯನ್ನು ಮೆಚ್ಚಿದ್ದಾರೆ. ಕೇಂದ್ರೀಯ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ತಮ್ಮ ಪೋಸ್ಟಿನಲ್ಲಿ ಇವರ ಸಾಧನೆಯನ್ನು ಶ್ಲಾಘಿಸಿದ್ದಾರೆ.