09 January 2026 | Join group

'ಶ್ರೀ ಲಕ್ಷ್ಮೀನರಸಿಂಹ ಗೆಳೆಯರ ಬಳಗ 21ನೇ ವಾರ್ಷಿಕೋತ್ಸವ: ಕಡೇಶಿವಾಲಯದಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ'

  • 02 Jan 2026 07:52:21 PM

ಬಂಟ್ವಾಳ, ಕಡೇಶಿವಾಲಯ: 'ಶ್ರೀ ಲಕ್ಷ್ಮೀನರಸಿಂಹ ಗೆಳೆಯರ ಬಳಗ (ರಿ.) ರಥಬೀದಿ, ಕಡೇಶಿವಾಲಯ', ಬಂಟ್ವಾಳ ತಾಲೂಕು ಇದರ 21ನೇ ವಾರ್ಷಿಕೋತ್ಸವದ ಅಂಗವಾಗಿ 'ಅಮೆಚೂರ್ ಕಬ್ಬಡಿ ಅಸೋಸಿಯೇಷನ್', ಬಂಟ್ವಾಳ ತಾಲೂಕು ಇದರ ಸಹಯೋಗದೊಂದಿಗೆ '55ಕೆಜಿ ವಿಭಾಗದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ' ಇದೇ ಬರುವ ದಿನಾಂಕ 04, ರವಿವಾರ 2026 ರಂದು ಅಪರಾಹ್ನ 1:30 ಗಂಟೆಗೆ ರಥಬೀದಿ ಕ್ರೀಡಾಂಗಣ ಕಡೇಶಿವಾಲಯ ದೇವಸ್ಥಾನ ಇಲ್ಲಿ ಜರಗಲಿದೆ.

 

ಉದ್ಘಾಟನಾ ಕಾರ್ಯಕ್ರಮ ಮಧ್ಯಾಹ್ನ 1.30ಕ್ಕೆ ನೆರವೇರಲಿದ್ದು, ಹಲವಾರು ಗಣ್ಯರು, ಮುಖ್ಯ ಅಥಿತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 

ಈ ಕಬ್ಬಡಿ ಪಂದ್ಯಾಟಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಶ್ರೀ ಲಕ್ಷ್ಮೀನರಸಿಂಹ ಗೆಳೆಯರ ಬಳಗ (ರಿ.) ರಥಬೀದಿ, ಕಡೇಶಿವಾಲಯ ಬಳಗದ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಪದಾಧಿಕಾರುಗಳು ಬಯಸಿದ್ದಾರೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಲ್ಲಿ ಲಗತ್ತಿಸಲಾಗಿದೆ.