ಐಪಿಎಲ್ 2ನೇ ಪಂದ್ಯದಲ್ಲಿ ಮುಂಬಯಿಗೆ ಕೊಲ್ಕತ್ತಾ ವಿರುದ್ಧ ಭರ್ಜರಿ ಜಯ

  • 29 Mar 2026 11:48:11 PM

IPL 2026: ಐಪಿಎಲ್ 2026ರ 2ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬಯಿ ತಂಡವು 19.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿ ಜಯ ಸಾಧಿಸಿತು.

 

ಕೊಲ್ಕತ್ತಾ ತಂಡದ ಅಜಿಂಕ್ಯ ರಹಾನೆ 40 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 67 ರನ್ ಗಳಿಸಿದರು. ಅಂಗಕೃಷ್ 29 ಎಸೆತಗಳಲ್ಲಿ 51 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಫಿನ್ ಅಲೆನ್ 37, ಕ್ಯಾಮೆರೋನ್ 18, ರಿಂಕು ಸಿಂಗ್ 33 ಮತ್ತು ರಾಮದೀಪ್ 4 ರನ್ ಗಳಿಸಿದರು.

 

ಮುಂಬಯಿ ತಂಡದ ಪರವಾಗಿ ಶಾರ್ದುಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ 4 ಓವರ್ ಗಳಲ್ಲಿ 3 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿಕೊಂಡರು. ಓಪನರ್ ರಿಯಾನ್ ರಿಕೇಲ್ಟನ್ 43 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 81 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ರೋಹಿತ್ ಶರ್ಮ 38 ಎಸೆತಗಳಲ್ಲಿ 78 ರನ್ ಬಾರಿಸಿ ತಂಡಕ್ಕೆ ಬಲ ನೀಡಿದರು. ಸೂರ್ಯಕುಮಾರ್ ಯಾದವ್ 16, ತಿಲಕ್ ವರ್ಮಾ 20 ಮತ್ತು ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದರು.

 

ಕೊಲ್ಕತ್ತಾ ತಂಡದ ಪರವಾಗಿ ವೈಭವ್, ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನಾರೈನ್ ತಲಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಮುಂಬಯಿ ತಂಡದ ಬೌಲರ್ ಶಾರ್ದುಲ್ ಠಾಕೂರ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಈ ಜಯದೊಂದಿಗೆ ಮುಂಬಯಿ ತಂಡ ಅಂಕಪಟ್ಟಿಯಲ್ಲಿ 2 ಅಂಕಗಳನ್ನು ಪಡೆದು ಬೆಂಗಳೂರು ತಂಡದ ಅಂಕಗಳಿಗೆ ಸಮನಾಯಿತು.