14 July 2026 |

270 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ: 142 ವರ್ಷಗಳ ನಂತರ ಬರೆದ ಇತಿಹಾಸ

  • 13 Jul 2026 09:04:53 PM

ಕ್ರಿಕೆಟ್‌ನ ತವರು ಮೈದಾನದಲ್ಲಿ ಭಾರತ ತಂಡ ಇಂಗ್ಲೆಂಡ್ ಅನ್ನು ಸೋಲಿಸಿದೆ.  ನಾಯಕಿ ಹರ್ಮನ್‌ಪ್ರೀತ್ ಕೌರ್ ಟ್ರೋಫಿಯನ್ನು ಎತ್ತಿ ಹಿಡಿದು ತಂಡದ ಜೊತೆ ಸಂಭ್ರಮಾಚರಣೆ ಮಾಡಿದರು. ವಿಶೇಷವೆಂದರೆ, 142 ವರ್ಷಗಳ ಕಾಲ ಕ್ರಿಕೆಟ್ ಇತಿಹಾಸದ ಒಂದು ತುಣುಕು ಕಾಣೆಯಾಗಿತ್ತು. ಟೀಮ್ ಇಂಡಿಯಾ ಅದನ್ನು ಬರೆದಿದೆ.

 

ಇಂಗ್ಲೆಂಡ್ ಎದುರು ಭಾರತ 457 ರನ್‌ಗಳ ಕಠಿಣ ಗುರಿ ನೀಡಿತ್ತು. ಆದರೆ ಈ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಆರಂಭದಿಂದಲೇ ಕುಸಿತ ಕಂಡಿತು.

 

ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಕೇವಲ 186 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 270 ರನ್‌ಗಳ ಭರ್ಜರಿ ಅಂತರದ ಗೆಲುವು ದಾಖಲಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

 

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿತು.