10 March 2026

ದುಬೈನಲ್ಲಿ ಮಾರ್ಚ್ 15ರಂದು ಬಿಲ್ಲವಾಸ್ ಫ್ಯಾಮಿಲಿ ವತಿಯಿಂದ ರಕ್ತದಾನ ಶಿಬಿರ

  • 09 Mar 2026 11:31:56 PM

ದುಬೈ: ಸಮಾಜ ಸೇವೆಯ ಉದ್ದೇಶದಿಂದ ಬಿಲ್ಲವಾಸ್ ಫ್ಯಾಮಿಲಿ ದುಬೈ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

 

ಮಾರ್ಚ್ 15ರಂದು ಭಾನುವಾರ ಮಧ್ಯಾಹ್ನ 12:00ರಿಂದ ರಾತ್ರಿ 1:30ರವರೆಗೆ ದುಬೈಯ ಅಲ್ ಜದ್ದಾಫ್‌ (Al Jaddaf) ನಲ್ಲಿರುವ ಬಿಡಿ ಸೆಂಟರ್(BD Center) ಡಿಎಚ್ಎ ಹೆಡ್‌ಕ್ವಾರ್ಟರ್ಸ್‌ (DHA Headquarters) ನಲ್ಲಿ ಈ ಶಿಬಿರ ನಡೆಯಲಿದೆ.

 

“ರಕ್ತದಾನ – ಜೀವದಾನ” ಎಂಬ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

 

ರಕ್ತದಾನವು ಅನೇಕರ ಜೀವವನ್ನು ಉಳಿಸಲು ಸಹಾಯಕವಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಿಬಿರದಲ್ಲಿ ಭಾಗವಹಿಸಿ ಸಮಾಜ ಸೇವೆಗೆ ಕೈಜೋಡಿಸಬೇಕೆಂದು ತಿಳಿಸಿದ್ದಾರೆ.