12 July 2026 |

ತುಳುನಾಡು ಜವನೆರ್ ಬೆಂಗಳೂರು(ರಿ) ವತಿಯಿಂದ ‘ಐಸಿರದ ಜೋಡಿ’ ರೀಲ್ಸ್ ಸ್ಪರ್ಧೆ; ತುಳುನಾಡಿನ ಯಾವುದೇ ಜೋಡಿಗಳಿಗೆ ಭಾಗವಹಿಸಲು ಆಹ್ವಾನ

  • 12 Jul 2026 03:14:15 PM

ಬೆಂಗಳೂರು/ಮಂಗಳೂರು: ತುಳುನಾಡು ಜವನೆರ್ ಬೆಂಗಳೂರು (ರಿ) ವತಿಯಿಂದ ‘ಐಸಿರದ ಜೋಡಿ’ ಎಂಬ ವಿಶೇಷ ರೀಲ್ಸ್ ಸ್ಪರ್ಧೆ (Reels Competition) ಆಯೋಜಿಸಲಾಗಿದೆ. ಮುಳಿಯ ಗೋಲ್ಡ್ & ಡೈಮಂಡ್ಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಸ್ಪರ್ಧೆ ಮೂಲಕ ತುಳುನಾಡಿನ ವಿವಿಧ ರೀತಿಯ ಜೋಡಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.

 

ಈ ಸ್ಪರ್ಧೆಯಲ್ಲಿ ಗಂಡ-ಹೆಂಡತಿ, ಅಣ್ಣ-ತಂಗಿ, ತಂದೆ-ಮಗಳು, ತಾಯಿ-ಮಗ, ಗೆಳೆಯ-ಗೆಳತಿ ಸೇರಿದಂತೆ ಯಾವುದೇ ಜೋಡಿಗಳು ಪಾಲ್ಗೊಳ್ಳಬಹುದು. ಸ್ಪರ್ಧಾಳುಗಳು ತಮ್ಮದೇ ಆದ ಸೃಜನಶೀಲತೆಯೊಂದಿಗೆ ರೀಲ್ಸ್ ವಿಡಿಯೋ ಸಿದ್ಧಪಡಿಸಿ ಕಳುಹಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು

 

ಆಕರ್ಷಕ ಬಹುಮಾನಗಳು : ತೀರ್ಪುಗಾರರ ಆಯ್ಕೆ ವಿಭಾಗ

ಪ್ರಥಮ ಬಹುಮಾನ – ₹10,000 + ಟ್ರೋಫಿ

ದ್ವಿತೀಯ ಬಹುಮಾನ – ₹6,000 + ಟ್ರೋಫಿ

ತೃತೀಯ ಬಹುಮಾನ – ₹3,000 + ಟ್ರೋಫಿ

 

ಅತ್ಯಧಿಕ ವೀಕ್ಷಣೆ (Views) ಪಡೆದ ರೀಲ್ಸ್ ವಿಭಾಗ

ಪ್ರಥಮ – ₹2,000 + ಟ್ರೋಫಿ

ದ್ವಿತೀಯ – ₹1,000 + ಟ್ರೋಫಿ

 

ಸ್ಪರ್ಧೆಯ ಪ್ರಮುಖ ನಿಯಮಗಳು

* ಒಂದು ನಿಮಿಷದ ಒಳಗಿನ ವಿಡಿಯೋ ಆಗಿರಬೇಕು.

* ತುಳು ಭಾಷೆಯಲ್ಲಿ ಕಾಮಿಡಿ, ಡ್ಯಾನ್ಸ್ ಅಥವಾ ಯಾವುದೇ ಸ್ವಂತ (Original) ತುಳು ಕಂಟೆಂಟ್ ಬಳಸಿ ರೀಲ್ಸ್ ಮಾಡಬಹುದು.

* ವಿಡಿಯೋ 9:16 Aspect Ratio ಹಾಗೂ 1080×1920 Resolution ನಲ್ಲಿ ಇರಬೇಕು.

* ಹೊಸದಾಗಿ ಸಿದ್ಧಪಡಿಸಿದ ವಿಡಿಯೋ ಮಾತ್ರ ಸ್ವೀಕರಿಸಲಾಗುವುದು. ಹಳೆಯ ವಿಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ.

* ಗಂಡ-ಹೆಂಡತಿ, ಅಣ್ಣ-ತಂಗಿ, ತಂದೆ-ಮಗಳು, ತಾಯಿ-ಮಗ, ಗೆಳೆಯ-ಗೆಳತಿ ಸೇರಿದಂತೆ ಯಾವುದೇ ಜೋಡಿಗಳು ಭಾಗವಹಿಸಬಹುದು.

* ಸ್ಪರ್ಧೆ ಜುಲೈ 10 ರಿಂದ ಆರಂಭವಾಗಿದೆ.

* ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 7.

* ಒರಿಜಿನಲ್ ಕಂಟೆಂಟ್, ನಟನೆ, ವೇಷಭೂಷಣ, ಪರಿಕರಗಳ ಬಳಕೆ, ಸೃಜನಶೀಲತೆ, ಸಮಯದ ಮಿತಿ ಹಾಗೂ ವಿಡಿಯೋಗ್ರಫಿ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.

* ಅಶ್ಲೀಲ, ಅವಾಚ್ಯ ಅಥವಾ ಅಸಭ್ಯ ಪದಗಳ ಬಳಕೆಯಿರುವ ವಿಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ.

* ತೀರ್ಪುಗಾರರ ಆಯ್ಕೆಯ ಮೂಲಕ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು.

* ಅತ್ಯಧಿಕ ರೀಚ್ ಮತ್ತು ವೀಕ್ಷಣೆ (Views) ಪಡೆದ ಎರಡು ವಿಡಿಯೋಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.

 

ಹೆಚ್ಚಿನ ಮಾಹಿತಿಗಾಗಿ 8951479573 ಸಂಖ್ಯೆಗೆ ವಾಟ್ಸ್ಆಪ್ ಮೂಲಕ ಸಂಪರ್ಕಿಸಬಹುದಾಗಿದೆ.

 

ಸೂಚನೆ: ಸ್ಪರ್ಧೆಯ ನಿಯಮಗಳು ಅಥವಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿದ್ದಲ್ಲಿ ಆಯೋಜಕರ ಅಧಿಕೃತ ಪ್ರಕಟಣೆಯೇ ಅಂತಿಮವಾಗಿರುತ್ತದೆ.