16 June 2026 |

ಪಣೆಕಲ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಮಾರಿ ಪೂಜೆಯ ಸಂಭ್ರಮ.

  • 07 Mar 2025 05:29:40 PM

ಬಂಟ್ವಾಳ, ಮಾರ್ಚ್ 07, 2025 : ಬಂಟ್ವಾಳ ತಾಲೂಕಿನ ಪಣೆಕಲ ಶ್ರೀ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನ ಹಾಗೂ ಪರಿವಾರ ಶಕ್ತಿಗಳ ಸೇವಾ ಟ್ರಸ್ಟ್ (ರಿ.), ಪಣೆಕಲ, ಕಸಬಾ ಗ್ರಾಮ, ಬಂಟ್ವಾಳ ಸಾನಿಧ್ಯದಲ್ಲಿ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಮಾರಿ ಪೂಜೆಯ ಸಂಭ್ರಮ.

 

ಇದೇ ಬರುವ ದಿನಾಂಕ 17ನೇ ಮಾರ್ಚ್ 2025ರ ಸೋಮವಾರದಿಂದ ದಿನಾಂಕ 18 ಮಾರ್ಚ್ 2025ರ ಮಂಗಳವಾರದವರೆಗೆ ನಡೆಯಲಿದೆ. ಶ್ರೀ ವೇದಮೂರ್ತಿ ವಸಂತ ತಂತ್ರಿ ಪಣೆಕಲ ಇವರ ಪೌರೋಹಿತ್ಯದಲ್ಲಿ ತಾಂತ್ರಿಕ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. 

 

ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಸಕುಂಟುಬಿಕರಾಗಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ತನು ಮನ ಧನಗಳಿಂದ ಸಹಕರಿಸಿ, ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಟ್ರಸ್ಟಿನ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು ಮತ್ತು ಮಹಿಳಾ ವಿಭಾಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಆಡಳಿತ ಸಮಿತಿಯ ಪ್ರತಿಯೊಬ್ಬರೂ ಅಪೇಕ್ಷಿಸಿದ್ದಾರೆ.