19 August 2026 |

ಬಿ.ಸಿ.ರೋಡ್‌ನಲ್ಲಿ ಆ.23ರಂದು ಉಚಿತ ಹೃದಯ ತಪಾಸಣಾ ಶಿಬಿರ

  • 18 Aug 2026 06:45:32 PM

ಬಂಟ್ವಾಳ: ಸ್ನೇಹ ಮಿಲನ ಕಲ್ಲಡ್ಕ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ, ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ, ಕುಂಟಿಕಾನ ಇವರ ಸಹಭಾಗಿತ್ವದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

 

ಆಗಸ್ಟ್ 23ರಂದು ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಬಿ.ಸಿ.ರೋಡ್‌ನ ರೈಲ್ವೆ ಸ್ಟೇಷನ್ ಎದುರುಗಡೆಯಲ್ಲಿರುವ ರೋಟರಿ ಕ್ಲಬ್‌ನಲ್ಲಿ ಶಿಬಿರ ನಡೆಯಲಿದೆ.

 

ಶಿಬಿರದಲ್ಲಿ ಇ.ಸಿ.ಜಿ., ಇಕೋ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣಾ ಸೌಲಭ್ಯಗಳು ಲಭ್ಯವಿರಲಿವೆ.

 

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

 

ಹೆಚ್ಚಿನ ಮಾಹಿತಿಗಾಗಿ: 98803031079844787470.