ದಕ್ಷಿಣ ಕನ್ನಡ, ತುಳುನಾಡು ಮತ್ತು ಕೊಡಗು ಭಾಗಗಳಲ್ಲಿ 'ಆಟಿ ಅಮಾವಾಸ್ಯೆ' ವಿಶೇಷವಾಗಿ 'ಸತ್ತವರ ಪಿತೃಗಳಿಗೆ ಬಡಿಸುವ ದಿನ'ವೆಂದು ಪರಿಗಣಿಸಲಾಗುತ್ತದೆ. ಈ ದಿನದ ಆಚರಣೆ "ಆಟಿದ ಅಗೇಲ್" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕುಟುಂಬದ ಹಿರಿಯರು, ಪಿತೃಗಳಿಗೆ ತಾನಾದಷ್ಟು ಶ್ರದ್ಧೆಯಿಂದ ಬಡಿಸುವ ಈ ಸಂಸ್ಕೃತಿಯ ಹಿಂದೆ ದೈವಿಕ ನಂಬಿಕೆಗಳ ಜೋಡಣೆ ಇದೆ.
ಆಟಿದ ಅಗೆಲ್ ಬಡಿಸಲು ಬೇಕಾದ ವಸ್ತುಗಳು:
ಈ ದಿನ ಬಡಿಸುವ ವಿಧಾನವು ವಿಶಿಷ್ಟ ಹಾಗೂ ಶಿಸ್ತುಬದ್ಧವಾಗಿದೆ. ಪ್ರಮುಖವಾಗಿ ಬಡಿಸುವ ಪದಾರ್ಥಗಳಲ್ಲಿ ಒಂದು ಕೋಳಿ ಪದಾರ್ಥ, ಒಂದು ಸೇರು ಅನ್ನ, ಒಣಗಿದ ಕೊಲ್ಲತರು (ಮೀನು) ಮಸಾಲೆ ಗಸಿ, 16 ಬಾಳೆ ಎಲೆಗಳಲ್ಲಿ ಬಡಿಸುವುದು ಶ್ರದ್ಧೆಯಾಗಿ ಪಾಲಿಸಲಾಗುತ್ತದೆ. ಈ ಎಲೆಗಳ ಮಧ್ಯದಲ್ಲಿ ಒಂದು ಮಣೆ ಇಟ್ಟು ಅದರ ಮೇಲೆ ಒಂದು ಬೈರಾಸ್ ಮತ್ತು ಅದರ ಮೇಲೊಂದು ಚೊಂಬು ನೀರು ಇಡಲಾಗುತ್ತದೆ.
ಆಟಿದ ಅಗೆಲ್ ಬಡಿಸುವ ವಿಧಾನ:
ಬಡಿಸುವ ಕ್ರಮ ಪ್ರಕಾರ ಮೊದಲು ಕೊಲ್ಲತರು ಮೀನು ಗಸಿ ಹಾಕಬೇಕು, ಆಮೇಲೆ ಅನ್ನ, ನಂತರ ಕೋಳಿ ಪದಾರ್ಥ ಹಾಕುವುದು. ಬಡಿಸುವ ಕ್ರಮ ಪೂರ್ತಿಯಾದ ಬಳಿಕ ಎಲೆ ಅಡಿಕೆ, ಬೀಡಿ, ನಸ್ಯ, ಮದ್ಯ ಇಡಬೇಕು. ನಂತರ ಮನೆಯ ಬಾಗಿಲು ಮುಚ್ಚಿ, ಎಲ್ಲರೂ ಕೆಲಕ್ಷಣ ಹೊರಗೆ ಹೋಗಬೇಕಾಗುತ್ತದೆ.
ಈ ನಂಬಿಕೆ ಪ್ರಕಾರ, ಪಿತೃಗಳು ಒಂದು ದಿನ – ಆಟಿ ಅಮಾವಾಸ್ಯೆಯಂದು – ಎಲ್ಲೆಡೆಯಿಂದ ಬಂದು ಈ ಸೇವೆಯನ್ನು ಸ್ವೀಕರಿಸುತ್ತಾರೆ. ಆಟಿ ಅಮಾವಾಸ್ಯೆಂದೇ ಈ ಸೇವೆ ನಡೆಯಬೇಕು ಎಂಬುದು ಪಾರಂಪರಿಕ ನಂಬಿಕೆ. ಸೇವೆ ನೀಡುವ ವೇಳೆ ವ್ಯಕ್ತಿಯ ಚಟಗಳಂತೆ – ಉದಾಹರಣೆಗೆ, ಮದ್ಯ, ಎಲೆ ಅಡಿಕೆ ಅಥವಾ ಬೀಡಿ ಬಳಕೆಯುಂಟಿದ್ದಲ್ಲಿ – ಅಂಥ ವಸ್ತುಗಳನ್ನು ಅವಶ್ಯ ಇಡುತ್ತಾರೆ.
ಸೇವೆ ನೀಡಿದ ಬಳಿಕ ಎಲ್ಲ ಎಲೆಗಳ ಮೇಲೂ ನೀರನ್ನು ತಂಪಾಗಿ ಪಸರಿಸಿ, ಎಲ್ಲರೂ ಕೈಮುಗಿದು ಆಶೀರ್ವಾದಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಅಗೆಲು ಬಡಿಸಿ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿದ ನಂತರ ಎಲ್ಲರೂ ಒಟ್ಟು ಸೇರಿ ಎಲೆಯ ಭೋಜನವನ್ನು ಹಂಚಿ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ಹಿರಿಯರು.
ನಂಬಿಕೆಯ ಪ್ರಕಾರ, ಈ ಸೇವೆ ಒಂದು ಬಾರಿ ಆರಂಭಿಸಿದರೆ ಅದನ್ನು ವರ್ಷಕ್ಕೊಮ್ಮೆ ನಿರಂತರವಾಗಿ ಮಾಡಬೇಕಾಗುತ್ತದೆ. ಬಡಿಸುವುದನ್ನು ನಿಲ್ಲಿಸಿದರೆ ಪಿತೃ ದೋಷ ಸಂಭವಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಕುಟುಂಬದ ಸದಸ್ಯರು ಈ ಆಚರಣೆಯನ್ನು ನಿರ್ವಹಿಸುತ್ತಲೇ ಇದ್ದಾರೆ ಉತ್ತಮ.
ಸಂಪಾದಕೀಯ ಟಿಪ್ಪಣಿ:
ಈ ಲೇಖನದ ವಿವರಣೆ ಹಳೆಯದೊಂದು ಫೇಸ್ಬುಕ್ ವಿಡಿಯೋ ಆಧಾರಿತವಾಗಿದ್ದು, ಜನಪದ ನಂಬಿಕೆಗಳ ಮತ್ತು ಸಂಸ್ಕೃತಿಯ ಪ್ರಸ್ತಾವನೆಯಾಗಿ ಬರೆಯಲಾಗಿದೆ. ಇದರಲ್ಲಿ ವಿಜ್ಞಾನಪರ ದೃಷ್ಟಿಕೋನವಲ್ಲ, ಸ್ಥಳೀಯ ಆಚರಣೆಗಳ ಪ್ರಾಮುಖ್ಯತೆ ಬಿಂಬಿಸಲಾಗಿದೆ.