‘ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಬಿರುದಿನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯ ದಿನ. ಭಾರತದ 11ನೇ ರಾಷ್ಟ್ರಪತಿ ಹಾಗೂ ಖ್ಯಾತ ವಿಜ್ಞಾನಿಯಾಗಿದ್ದ ಡಾ. ಕಲಾಂ ರವರು ಅಸ್ತ್ರೋ, ಕ್ಷಿಪಣಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಮಹತ್ವಪೂರ್ಣ ಕೊಡುಗೆ ನೀಡಿದ್ದರು.
ಯುವಕರು ವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತೇಜಿತರಾಗಬೇಕು ಎಂಬುದು ಅವರ ಕನಸಾಗಿತ್ತು. ಜುಲೈ 27, 2015 ರಂದು ಅವರು ಶಿಲ್ಲಾಂಗ್‌ನಲ್ಲಿ ಭಾಷಣ ಮಾಡುತ್ತಿರುವಾಗ ಹೃದಯಾಘಾತದಿಂದ ವಿಧಿವಶರಾದರು.
'ಜನತೆಯ ಅಧ್ಯಕ್ಷ' ಎಂದೇ ಹೆಸರುವಾಸಿಯಾಗಿದ್ದ ಮಾಜಿ ರಾಷ್ಟ್ರಪತಿ, ದೇಶದ ಖ್ಯಾತ ವಿಜ್ಞಾನಿ, ದೀರ್ಘ ಸಮಯ ದೇಶದ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದ ಅಬ್ದುಲ್ ಕಲಾಂ ರವರು ಕೆನೆಯುಸಿರೆಳುವಾಗ ಅವರ ಬಳಿ ಇದ್ದ ಆಸ್ತಿಯ ವಿವರ ನೋಡಿ,
2500 ಪುಸ್ತಕಗಳು
6 ಪ್ಯಾಂಟ್, 4 ಶರ್ಟ್ ಮತ್ತು 3 ಸೂಟ್ ಕೇಸ್
46 ಡಾಕ್ಟರೇಟ್ ಪದವಿಗಳು
1 ಪದ್ಮಶ್ರೀ, 1 ಪದ್ಮಭೂಷಣ, 1 ಭಾರತ ರತ್ನ
ಸರಳವಾಗಿ ಜೀವಿಸಿ, ಉನ್ನತವಾಗಿ ಯೋಚಿಸಿ ಮತ್ತು ಆದರ್ಶಯುತವಾಗಿ ಬದುಕು ನಡೆಸಿ ಎಂದು ಕಲಿಸಿಕೊಟ್ಟವರು ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ರವರು.