07 February 2026 | Join group

ಪಿಲಿಕುಳ ಮೃಗಾಲಯಕ್ಕೆ ಶಾಕ್: ಪ್ರಾಣಿಗಳ ದುಸ್ಥಿತಿಗೆ ಹೈಕೋರ್ಟ್ ಮುಚ್ಚಲು ಆದೇಶ

  • 07 Feb 2026 02:07:59 PM

ಮಂಗಳೂರು: ಪ್ರಾಣಿಗಳ ದುಸ್ಥಿತಿಗೆ ಸಂಬಂಧಿಸಿದಂತೆ ಗಂಭೀರವಾಗಿ ಗಮನಿಸಿದ ಹೈಕೋರ್ಟ್, ಪಿಲಿಕುಳ ಮೃಗಾಲಯವನ್ನು ತಕ್ಷಣ ಮುಚ್ಚುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ಸಲ್ಲಿಸಲಾದ ಫೋಟೋಗಳನ್ನು ಪರಿಶೀಲಿಸಿದ ನ್ಯಾಯಪೀಠ, ಕಬ್ಬಿಣದ ಜಂಗಲು ಬೋನುಗಳು, ಅಶುದ್ಧ ವಾತಾವರಣ ಹಾಗೂ ಪ್ರಾಣಿಗಳ ಆರೋಗ್ಯ ಸ್ಥಿತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

 

ಮೃಗಾಲಯದ ಪರವಾನಗಿ ಅವಧಿ ಡಿಸೆಂಬರ್ 2025ರಲ್ಲಿ ಮುಕ್ತಾಯಗೊಂಡಿರುವ ಕುರಿತು ಸಹ ನ್ಯಾಯಾಲಯ ಪ್ರಶ್ನೆ ಎತ್ತಿದೆ. ಪ್ರಾಣಿಗಳ ಆರೋಗ್ಯ, ವೈದ್ಯಕೀಯ ಸೌಲಭ್ಯ, ಕುಡಿಯುವ ನೀರು ಹಾಗೂ ನಿರ್ವಹಣೆಯ ಕುರಿತು ಸರ್ಕಾರ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

 

ಪ್ರಾಣಿಗಳ ಕಲ್ಯಾಣಕ್ಕೆ ಧಕ್ಕೆಯಾಗುವ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಮಾನದಂಡಗಳನ್ನು ಪೂರೈಸುವವರೆಗೆ ಮೃಗಾಲಯ ಮುಚ್ಚಿರಬೇಕು ಎಂದು ಆದೇಶಿಸಿದೆ.