11 March 2026
sudhavanikannada@gmail.com

ಭಾರತದಲ್ಲಿ ಹೆಚ್ಚು ಮದ್ಯ ಸೇವಿಸುವ ರಾಜ್ಯ ಯಾವುದು ಗೊತ್ತಾ? ಮೊದಲ ಸ್ಥಾನ ಯಾರಿಗೆ… ಕರ್ನಾಟಕ ಯಾವ ಸ್ಥಾನದಲ್ಲಿ?

  • 10 Mar 2026 11:02:52 PM

ಭಾರತದಲ್ಲಿ ಮದ್ಯ ಬಳಕೆ ಕುರಿತು ಹೊರಬಂದ ಅಂಕಿಅಂಶಗಳು ಹಲವು ಜನರಿಗೆ ಅಚ್ಚರಿ ಮೂಡಿಸುತ್ತಿವೆ. ದೇಶದ ವಿವಿಧ ರಾಜ್ಯಗಳಲ್ಲಿ ಮದ್ಯ ಬಳಕೆಯ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿದ್ದು, ಕೆಲ ರಾಜ್ಯಗಳು ಹೆಚ್ಚು ಬಳಕೆ ಮಾಡುತ್ತಿರುವುದು ಗಮನ ಸೆಳೆದಿದೆ.

 

ಅಂಕಿಅಂಶಗಳ ಪ್ರಕಾರ, ಮದ್ಯ ಬಳಕೆಯಲ್ಲಿ ಮೊದಲ ಸ್ಥಾನವನ್ನು ಕರ್ನಾಟಕ ರಾಜ್ಯ ಪಡೆದುಕೊಂಡಿದೆ. ನಂತರದ ಸ್ಥಾನಗಳಲ್ಲಿ ದಕ್ಷಿಣ ಭಾರತದ ಇನ್ನೂ ಹಲವು ರಾಜ್ಯಗಳು ಕಾಣಿಸಿಕೊಂಡಿವೆ.

 

ಭಾರತದಲ್ಲಿ ಹೆಚ್ಚು ಮದ್ಯ ಸೇವಿಸುವ ಟಾಪ್ 10 ರಾಜ್ಯಗಳು

1. ಕರ್ನಾಟಕ – 6.88 ಕೋಟಿ ಕೇಸ್

2. ತಮಿಳು ನಾಡು – 6.47 ಕೋಟಿ ಕೇಸ್

3. ತೆಲಂಗಾಣ – 3.71 ಕೋಟಿ ಕೇಸ್

4. ಆಂಧ್ರ ಪ್ರದೇಶ – 3.55 ಕೋಟಿ ಕೇಸ್

5. ಮಹಾರಾಷ್ಟ್ರ – 2.71 ಕೋಟಿ ಕೇಸ್

6. ಉತ್ತರ ಪ್ರದೇಶ – 2.50 ಕೋಟಿ ಕೇಸ್

7. ಕೇರಳ – 2.29 ಕೋಟಿ ಕೇಸ್

8. ಪಶ್ಚಿಮ ಬಂಗಾಳ – 1.49 ಕೋಟಿ ಕೇಸ್

9. ರಾಜಸ್ಥಾನ – 1.37 ಕೋಟಿ ಕೇಸ್

10. ದೆಹಲಿ – 1.18 ಕೋಟಿ ಕೇಸ್

 

ವಿಶೇಷವಾಗಿ, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ರಾಜ್ಯವು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ. ಸುಮಾರು 24 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದರೂ, ಮದ್ಯ ಬಳಕೆ ಪ್ರಮಾಣವು ದಕ್ಷಿಣ ರಾಜ್ಯಗಳಿಗಿಂತ ಕಡಿಮೆ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.

 

ಇನ್ನೊಂದೆಡೆ, ಕರ್ನಾಟಕ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ನಗರೀಕರಣ, ಮಾರಾಟ ನೀತಿಗಳು ಮತ್ತು ಸಾಮಾಜಿಕ ಜೀವನಶೈಲಿ ಮುಂತಾದ ಕಾರಣಗಳಿಂದ ಮದ್ಯ ಮಾರಾಟ ಮತ್ತು ಬಳಕೆ ಹೆಚ್ಚು ಎನ್ನಲಾಗಿದೆ. ಈ ಅಂಕಿಅಂಶಗಳು ದೇಶದ ವಿವಿಧ ಭಾಗಗಳಲ್ಲಿ ಮದ್ಯ ಬಳಕೆಯ ಪ್ರವೃತ್ತಿ ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸುತ್ತವೆ.