21 June 2026 |

ದೆಹಲಿ ಶಿಶು ಕಳ್ಳಸಾಗಣೆ ಜಾಲ ಪತ್ತೆ: ಗಂಡು ಮಗುವಿಗೆ ₹8 ಲಕ್ಷ, ಹೆಣ್ಣು ಮಗುವಿಗೆ ₹4 ಲಕ್ಷಕ್ಕೆ ಮಾರಾಟ ಆರೋಪ

  • 21 Jun 2026 06:41:16 PM

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವಜಾತ ಶಿಶುಗಳ ಅಕ್ರಮ ಖರೀದಿ–ಮಾರಾಟ ನಡೆಸುತ್ತಿದ್ದ ದೊಡ್ಡ ಮಟ್ಟದ ಕಳ್ಳಸಾಗಣೆ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದು, ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಜಾಲವನ್ನು ಹಲವರು ‘ಬೇಬಿ ಬಜಾರ್’ ಎಂದು ಕರೆಯುತ್ತಿದ್ದಾರೆ.

 

ಪೊಲೀಸರ ತನಿಖೆಯ ಪ್ರಕಾರ, ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಗಳಿಂದ ಗಂಡು ಮಕ್ಕಳನ್ನು ₹20 ಸಾವಿರದಿಂದ ₹2 ಲಕ್ಷದವರೆಗೆ ಹಣ ನೀಡಿ ಪಡೆದುಕೊಳ್ಳಲಾಗುತ್ತಿತ್ತು. ಬಳಿಕ ಮಕ್ಕಳಿಲ್ಲದ ದಂಪತಿಗಳಿಗೆ ಅದೇ ಮಕ್ಕಳನ್ನು ₹6 ಲಕ್ಷದಿಂದ ₹8 ಲಕ್ಷದವರೆಗೆ ಮಾರಾಟ ಮಾಡಲಾಗುತ್ತಿತ್ತು. ಹೆಣ್ಣು ಮಕ್ಕಳನ್ನು ಸುಮಾರು ₹1 ಲಕ್ಷಕ್ಕೆ ಖರೀದಿಸಿ, ₹3 ಲಕ್ಷದಿಂದ ₹4 ಲಕ್ಷದವರೆಗೆ ಹಣ ಪಡೆದು ಮಾರಾಟ ಮಾಡುತ್ತಿದ್ದರೆಂಬ ಮಾಹಿತಿ ಬೆಳಕಿಗೆ ಬಂದಿದೆ.

 

ದೆಹಲಿಯ ರೋಹಿಣಿಯ ಬೇಗಂಪುರ ಪ್ರದೇಶದಲ್ಲಿರುವ ‘ಹೀರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಈ ಅಕ್ರಮ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಮಾಲೀಕೆಯಾಗಿರುವ ಡಾ. ವಿವೇಕಿ ನಕಲಿ ಜನನ ಪ್ರಮಾಣಪತ್ರಗಳು ಹಾಗೂ ಹೆರಿಗೆ ದಾಖಲೆಗಳನ್ನು ಸಿದ್ಧಪಡಿಸಿ, ಮಕ್ಕಳು ಕಾನೂನುಬದ್ಧವಾಗಿ ಅದೇ ಆಸ್ಪತ್ರೆಯಲ್ಲಿ ಜನಿಸಿದವರಂತೆ ತೋರಿಸುತ್ತಿದ್ದರೆಂದು ಆರೋಪಿಸಲಾಗಿದೆ.