ಮಂಗಳೂರು: ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಶುಕ್ರವಾರ (ಜೂನ್ 26) ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಪ್ರಕೋಷ್ಠದ ನೂತನ ಜಿಲ್ಲಾ ಸಮಿತಿ ಸದಸ್ಯರು, ವಿವಿಧ ಮಂಡಲಗಳ ಸಂಚಾಲಕರು ಹಾಗೂ ಸಹಸಂಚಾಲಕರ ಪಟ್ಟಿಯನ್ನು ಜಿಲ್ಲಾ ಸಂಚಾಲಕ ಶ್ರೀಧರ ಪುಳಿಂಚ ಪ್ರಕಟಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಸಹಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಶೆ ಸ್ವಾಗತಿಸಿದರು. ಜಿಲ್ಲಾ ಪ್ರಕೋಷ್ಠದ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು ಅತಿಥಿ ಭಾಷಣ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ ಅವರು ಕಾನೂನು ಪ್ರಕೋಷ್ಠದ ಬೆಳವಣಿಗೆ ಮತ್ತು ಅದರ ಕಾರ್ಯಚಟುವಟಿಕೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪ್ರಕೋಷ್ಠದ ಸಹ ಸಂಯೋಜಕ ಪ್ರಸನ್ನ ದರ್ಬೆ, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ ಹಾಗೂ ಕೆ. ಸುಧಾಕರ ಜೋಷಿ ಉಪಸ್ಥಿತರಿದ್ದರು.
ನೂತನ ಜಿಲ್ಲಾ ಸಮಿತಿ ಸದಸ್ಯರಾಗಿ ಪುರುಷೋತ್ತಮ ಭಟ್, ಎನ್. ನರಸಿಂಹ ಹೆಗ್ಡೆ, ಪುರಂದರ ಶೆಟ್ಟಿ ಬಲ್ಯ, ವೇಣು ಕುಮಾರ್, ಶ್ರೀಧರ್ ಸುವರ್ಣ, ಸಂದೀಪ್ ವಳಲಂಬೆ ಹಾಗೂ ಅಕ್ಷತಾ ಅವರನ್ನು ನೇಮಕ ಮಾಡಲಾಯಿತು.
ಇದೇ ವೇಳೆ ವಿವಿಧ ಮಂಡಲಗಳ ಸಂಚಾಲಕರು ಮತ್ತು ಸಹಸಂಚಾಲಕರಾಗಿ ಶಶಿಕುಮಾರ್ ಮೂಲ್ಕಿ, ಶುಕರಾಜ್ ಎಸ್. ಕೊಟ್ಟಾರಿ, ಶಿವರಾಜ್ ಶೆಟ್ಟಿ, ಚಂದ್ರಹಾಸ್ ಕೊಟ್ಟಾರಿ, ದಿನೇಶ್ ಎನ್., ಬಾಲಕೃಷ್ಣ ಎ. ಉಳ್ಳಾಲಬೈಲ್, ಅಭಿಲಾಷ್ ಶಾಸ್ತ್ರಿ, ವೀರೇಂದ್ರ ಎಂ. ಸಿದ್ದಕಟ್ಟೆ, ರಮೇಶ್ ಕೆ. ಮಠದಮೂಲೆ, ಕೃಷ್ಣಪ್ರಸಾದ್ ನಡ್ಸಾರ್, ಮಹೇಶ್ ಕೆ. ಸವಣೂರು, ಸೌಮ್ಯ ಪಿ., ಯತೀಶ್ ಶೆಟ್ಟಿ ಪಣಿಕ್ಕರ, ಚೇತನ್ ಕುಮಾರ್ ಶೆಟ್ಟಿ, ಗೋವಿಂದರಾಜ್, ರವೀಂದ್ರನಾಥ್ ರೈ, ಶಶಿಕುಮಾರ್ ಕಲ್ಲುರಾಯ ಹಾಗೂ ಸಂದೀಪ್ ಮದುವೆಗದ್ದೆ ಅವರನ್ನು ಘೋಷಿಸಲಾಯಿತು. ಕಾರ್ಯಕ್ರಮವನ್ನು ಸಂದೀಪ್ ವಳಲಂಬೆ ನಿರೂಪಿಸಿದ್ದು, ಶ್ರೀಧರ್ ಸುವರ್ಣ ವಂದಿಸಿದರು.





