ಸುಳ್ಯ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಹಾನಿ ಸಂಭವಿಸುತ್ತಿದೆ.
ನಿರಂತರ ಮಳೆಯಿಂದ ಮರಗಳು ಧರೆಗುರುಳುವ ಘಟನೆಗಳು ಹೆಚ್ಚಾಗಿದ್ದು, ಜೀವಹಾನಿ ಮತ್ತು ಆಸ್ತಿ ನಷ್ಟದ ಆತಂಕವೂ ಎದುರಾಗಿದೆ.
ಇದರ ನಡುವೆ ಬಳ ಗ್ರಾಮದ ನೇರ್ಪು ನಿವಾಸಿ ಪರಮೇಶ್ವರ ಗೌಡ ಅವರ ಮನೆ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ.
ಅಪಘಾತ ಸಂಭವಿಸಿದ ವೇಳೆ ಮನೆಯೊಳಗಿದ್ದ ಪರಮೇಶ್ವರ ಗೌಡ ಅವರ ಪತ್ನಿ ಸೀತಮ್ಮ ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಮನೆಯಿಗೂ ಹಾನಿಯಾಗಿರುವುದು ತಿಳಿದುಬಂದಿದೆ.





