ಹೊಸದಿಲ್ಲಿ: ಭಾರತೀಯ ವಾಯುಪಡೆಯ ಸ್ಮಾಡ್ರನ್ ಲೀಡರ್ ಭಾವನಾ ಕಾಂತ್ ಅವರು ದೇಶದ ಮೊದಲ ಮಹಿಳಾ ‘ಟಾಪ್ ಗನ್’ ಫೈಟರ್ ಕಾಂಬ್ಯಾಟ್ ಲೀಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
‘ಟಾಪ್ ಗನ್’ ಸ್ಥಾನವು ವಾಯುಪಡೆಯ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾಗಿದೆ. ಈ ಹಂತದಲ್ಲಿ ಅತ್ಯಾಧುನಿಕ ವೈಮಾನಿಕ ಯುದ್ಧ ತಂತ್ರಗಳು, ಶತ್ರು ವಿಮಾನಗಳನ್ನು ಎದುರಿಸುವ ಕೌಶಲ್ಯ ಹಾಗೂ ಸಂಕೀರ್ಣ ಯುದ್ಧ ಕಾರ್ಯಾಚರಣೆಗಳ ಯೋಜನೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ.
ವಾಯುಪಡೆಯ ಒಟ್ಟು ಸಿಬ್ಬಂದಿಯಲ್ಲಿ ಕೇವಲ ಶೇ.1ರಷ್ಟು ಮಂದಿಗೆ ಮಾತ್ರ ಈ ಅತ್ಯುನ್ನತ ಮಟ್ಟದ ಅರ್ಹತೆ ಹಾಗೂ ಜವಾಬ್ದಾರಿ ಹೊಂದಿರುವ ಸ್ಥಾನ ಪಡೆಯುವ ಅವಕಾಶವಿದೆ. ಈ ಮೂಲಕ ಭಾವನಾ ಕಾಂತ್ ಭಾರತೀಯ ವಾಯುಪಡೆಯಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದ್ದಾರೆ.





