18 August 2026 |

ಬ್ಯಾಂಕ್ ಆಫ್ ಬರೋಡಾ ATMನಲ್ಲಿ ಭದ್ರತಾ ಲೋಪ? ನಗದು ತುಂಬಿದ ಬಳಿಕ ಕೀ ಬಿಟ್ಟು ಹೋದ ಸಿಬ್ಬಂದಿ

  • 18 Aug 2026 02:58:15 PM

ಬೆಂಗಳೂರು: ನಗರದ ಹೊರವಲಯದ ಹೋರಮಾವು ಅಗರ್ ಮುಖ್ಯರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ATMನಲ್ಲಿ ಭದ್ರತಾ ಲೋಪ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 

 

ನಗದು ತುಂಬಿಸುವ ಕಾರ್ಯದ ಬಳಿಕ ATMನ ಪ್ರಮುಖ ಕೀಯನ್ನು ಸಿಬ್ಬಂದಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

 

ATMಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ಹಾಗೂ ಪೊಲೀಸರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.