29 August 2026 |

ಕಾನ್ಪುರದಲ್ಲಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಸಾವು

  • 29 Aug 2026 03:05:53 AM

ಉಡುಪಿ:ಉತ್ತರಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು ಖಾಸಗಿ ತರಬೇತಿಯ ಸಂದರ್ಭದಲ್ಲಿ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಉಡುಪಿ ಮೂಲದ 22 ವರ್ಷದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಮೃತಪಟ್ಟಿದ್ದಾರೆ.

 

ಮೃತ ಅಭಿಷೇಕ್ ಪೂಜಾರಿ ಅವರು ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕಣಜಾರು ಗ್ರಾಮದ ಕಡೇಬೆರ್ಕೆ ಮೂಲದವರು. ಪ್ರಭಾಕರ ಪೂಜಾರಿ ಮತ್ತು ಶಶಿಕಲಾ ಪೂಜಾರಿ ದಂಪತಿಯ ಪುತ್ರರಾಗಿರುವ ಅಭಿಷೇಕ್ ಕುಟುಂಬ ಪ್ರಸ್ತುತ ಮುಂಬೈನಲ್ಲಿ ನೆಲೆಸಿದೆ.

 

ಅಭಿಷೇಕ್ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರಪ್ರದೇಶದ ಕಾಲ್ಪುರದಲ್ಲಿ ಖಾಸಗಿ ಟ್ರೈನಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ಅವರ ತಂದೆ ಪ್ರಭಾಕರ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಮುಂಬೈನಲ್ಲೇ ವಾಸವಾಗಿದ್ದಾರೆ.