31 August 2026 |

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ಲೋಕಾರ್ಪಣೆ

  • 30 Aug 2026 01:55:42 PM

ಬಂಟ್ವಾಳ: ತಾಲೂಕಿನ ಬೀಸಿ ರೋಡ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ಇಂದು ಲೋಕಾರ್ಪಣೆಗೊಂಡಿತು.

 

ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಸಾರ್ವಜನಿಕರು ಹಾಗೂ ನಾರಾಯಣ ಗುರುಗಳ ಅನುಯಾಯಿಗಳು ಭಾಗವಹಿಸಿದ್ದರು. ಸರ್ಕಲ್ ಲೋಕಾರ್ಪಣೆಯ ಮೂಲಕ ಪ್ರದೇಶಕ್ಕೆ ಹೊಸ ಮೆರುಗು ದೊರೆತಿದ್ದು, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಹಾಗೂ ಆದರ್ಶಗಳನ್ನು ಸ್ಮರಿಸುವ ಸಂಕೇತವಾಗಿ ಇದು ಮೂಡಿಬಂದಿದೆ.

 

ಸ್ಥಳೀಯರ ಬಹುದಿನಗಳ ಆಶಯವಾಗಿದ್ದ ಸರ್ಕಲ್ ಇದೀಗ ಅಧಿಕೃತವಾಗಿ ಲೋಕಾರ್ಪಣೆಗೊಂಡಿರುವುದು ಸಾರ್ವಜನಿಕರಲ್ಲಿ ಸಂತಸಕ್ಕೆ ಕಾರಣವಾಗಿದೆ.