ಮಂಗಳೂರು: ನಗರದ ಕೋರ್ಟ್ ರೋಡ್‌ನಲ್ಲಿ ಇಂದು ಬೆಳಗ್ಗೆ ರಿಕ್ಷಾ, ಗೂಡ್ಸ್ ಟೆಂಪೊ ಹಾಗೂ ಕಾರಿನ ನಡುವೆ ಸ್ಕೂಟರ್ ಸಿಲುಕಿ ಜಖಂಗೊಂಡಿದ್ದು, ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬಂಟ್ಸ್ ಹಾಸ್ಟೆಲ್–ಪಿವಿಎಸ್ ಜಂಕ್ಷನ್ ನಡುವಿನ ರಸ್ತೆಯಲ್ಲಿ, ಮೆಡಿಕಲ್‌ವೊಂದರ ಮುಂಭಾಗ ಕೋರ್ಟ್ ಕಡೆಗೆ ತೆರಳುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.
ಮಾಹಿತಿಯಂತೆ, ರಿಕ್ಷಾ ಹಾಗೂ ಗೂಡ್ಸ್ ಟೆಂಪೊ ಕೋರ್ಟ್ ಭಾಗದಿಂದ ಕೆ.ಆರ್.ಆರ್. ರಸ್ತೆ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಕಾರೊಂದು ಕೆ.ಆರ್.ಆರ್. ರಸ್ತೆಯಿಂದ ಕೋರ್ಟ್ ಕಡೆಗೆ ಬರುತ್ತಿತ್ತು. ಈ ಎರಡು ವಾಹನಗಳ ನಡುವೆ ಸ್ಕೂಟರ್ ಸಿಲುಕಿಕೊಂಡ ಪರಿಣಾಮ ಸ್ಕೂಟರ್ ಅಪ್ಪಚ್ಚಿಯಾಗಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಘಟನೆಯ ನಿಖರ ಕಾರಣ ತಿಳಿದುಬರಬೇಕಿದೆ.





