09 October 2026 |

ಕರ್ನಾಟಕದಲ್ಲಿ 1,000ಕ್ಕೂ ಹೆಚ್ಚು ESI ಸಿಬ್ಬಂದಿಗೆ ವೇತನ ವಿಳಂಬ; ಮಂಗಳೂರಿಗೂ ಪರಿಣಾಮ

  • 08 Oct 2026 08:28:47 PM

ಕರ್ನಾಟಕದ ವಿವಿಧ ESI ಆಸ್ಪತ್ರೆಗಳು ಹಾಗೂ ಔಷಧ ವಿತರಣೆ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 1,000ಕ್ಕೂ ಹೆಚ್ಚು ವೈದ್ಯರು ಮತ್ತು ಸಿಬ್ಬಂದಿಗೆ ಸೆಪ್ಟೆಂಬರ್ ತಿಂಗಳ ವೇತನ ಇನ್ನೂ ದೊರೆತಿಲ್ಲ ಎಂದು ವರದಿಯಾಗಿದೆ.

 

ಮೈಸೂರು, ದಾವಣಗೆರೆ, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿರುವ ESI ಸಂಸ್ಥೆಗಳಲ್ಲಿ ವೇತನ ಪಾವತಿ ವಿಳಂಬದ ಸಮಸ್ಯೆ ಉಂಟಾಗಿದೆ. ಇದರ ಪರಿಣಾಮ ಮಂಗಳೂರು, ಹುಬ್ಬಳ್ಳಿ ಹಾಗೂ ಬೆಂಗಳೂರಿನ ESI ಡಿಸ್ಪೆನ್ಸರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ತಟ್ಟಿದೆ.

 

ವೇತನ ವಿಳಂಬ ಇದೇ ಮೊದಲ ಬಾರಿಗೆ ಸಂಭವಿಸಿರುವುದಲ್ಲ. ಕಳೆದ ಮಾರ್ಚ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ವೇತನ ಪಾವತಿಗೆ ಅಗತ್ಯವಿರುವ ಹಣ ಬಿಡುಗಡೆಗೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿನ ಸಮಸ್ಯೆಯೇ ವಿಳಂಬಕ್ಕೆ ಕಾರಣವಾಗಿದೆ ಎಂದು ಸಿಬ್ಬಂದಿ ಸಂಘಟನೆ ಆರೋಪಿಸಿದೆ. ಇದರಿಂದ ಹಲವು ESI ಸಿಬ್ಬಂದಿ ವೇತನಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.