12 October 2026 |

ಲಗೇಜ್ ಟ್ರ್ಯಾಲಿಯಲ್ಲಿ ಅಡಗಿಸಿಟ್ಟಿದ್ದ ₹1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ!

  • 11 Oct 2026 04:02:06 PM

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪಿಗಳಿಂದ ಸುಮಾರು ₹1.80 ಕೋಟಿ ಮೌಲ್ಯದ 1.3 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

 

ಆರೋಪಿಗಳು ಚಿನ್ನವನ್ನು ಲಗೇಜ್ ಟ್ರ್ಯಾಲಿಗಳಿಗೆ ಅಂಟಿಸಿ ಸಾಗಿಸುತ್ತಿದ್ದರು ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಅಮಾಯಕ ಪ್ರಯಾಣಿಕರು ಆ ಟ್ರ್ಯಾಲಿಗಳನ್ನು ತೆಗೆದುಕೊಂಡು ಕಸ್ಟಮ್ಸ್ ತಪಾಸಣೆ ದಾಟಿದ ಬಳಿಕ, ಅವರ ಹಿಂದೆ ಹೋಗಿ ಟ್ರ್ಯಾಲಿಗಳಿಂದ ಚಿನ್ನವನ್ನು ಮರಳಿ ಪಡೆಯುವ ತಂತ್ರ ಅನುಸರಿಸುತ್ತಿದ್ದರು ಎಂದು ವರದಿಯಾಗಿದೆ.

 

ಈ ರೀತಿಯಲ್ಲಿ ಪ್ರಯಾಣಿಕರನ್ನು ಬಳಸಿಕೊಂಡು ಚಿನ್ನ ಸಾಗಿಸುತ್ತಿದ್ದ ಆರೋಪಿಗಳ ಕೃತ್ಯವನ್ನು ಪತ್ತೆಹಚ್ಚಿದ ಅಧಿಕಾರಿಗಳು, ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದೆ.