22 October 2026 |

ಡೆತ್‌ನೋಟ್ ಬರೆದಿಟ್ಟು ನದಿಗೆ ಹಾರಿದ ಶಿಕ್ಷಕಿ; ಮೂವರ ವಿರುದ್ಧ ಗಂಭೀರ ಆರೋಪ

  • 21 Oct 2026 11:33:52 AM

ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸಂಗೀತ ಮೇಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 19ರಂದು ಕೊಪ್ಪಳಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಅವರು, ಬಳಿಕ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ವಿಜಯನಗರ ಜಿಲ್ಲೆಯ ಗಡಿ ಭಾಗದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

 

ಡೆತ್‌ನೋಟ್‌ನಲ್ಲಿ ಪ್ರೀತಿಯ ವಿಚಾರ ಪ್ರಸ್ತಾಪ

ಆತ್ಮಹತ್ಯೆಗೂ ಮುನ್ನ ಸಂಗೀತ ಅವರು ಡೆತ್‌ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಅದರಲ್ಲಿ ತಮ್ಮ ಸಂಬಂಧಿ ವಿಕಾಸ್ ಅವರನ್ನು ಕಳೆದ 14 ವರ್ಷಗಳಿಂದ ಪ್ರೀತಿಸುತ್ತಿದ್ದುದಾಗಿ ಉಲ್ಲೇಖಿಸಿದ್ದಾರೆ.

 

ಇವರ ಪ್ರೀತಿಯ ವಿಚಾರ ಎರಡೂ ಕುಟುಂಬಗಳಿಗೆ ತಿಳಿದಿದ್ದರೂ, ಮದುವೆಯ ವಿಷಯದಲ್ಲಿ ವಿಕಾಸ್ ಅವರ ಮನೆಯಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂದು ತಿಳಿದುಬಂದಿದೆ. ಡೆತ್‌ನೋಟ್‌ನಲ್ಲಿ ಪ್ರಿಯತಮ ಸೇರಿದಂತೆ ಮೂವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.