28 October 2026 |

ಮದುವೆಯಾದ ಐದೇ ದಿನಕ್ಕೆ ದುರಂತ ಅಂತ್ಯ: ಬಸ್–ಬೈಕ್ ಡಿಕ್ಕಿಯಲ್ಲಿ ನವವಿವಾಹಿತ ಸಾವು!

  • 28 Oct 2026 08:34:38 AM

ಚಿಕ್ಕಮಗಳೂರು: ಮದುವೆಯಾಗಿ ಕೇವಲ ಐದು ದಿನಗಳಷ್ಟೇ ಕಳೆದಿದ್ದ ಯುವಕನೊಬ್ಬ ಬಸ್ ಮತ್ತು ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಶೃಂಗೇರಿ ತಾಲೂಕಿನ ಮೆಣಸೆ ಸಮೀಪ ನಡೆದಿದೆ.

 

ಮೃತರನ್ನು ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ ನಾಗರಾಜ್ (32) ಎಂದು ಗುರುತಿಸಲಾಗಿದೆ. ಬಸ್‌ಗೆ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ನಾಗರಾಜ್ ಅವರ ದೇಹದ ಬಹುಭಾಗ ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ.

 

ನಾಗರಾಜ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ದುಃಖದ ವಾತಾವರಣ ಆವರಿಸಿದೆ. ಹೊಸ ಜೀವನ ಆರಂಭಿಸಿದ್ದ ಮಗನನ್ನು ಕಳೆದುಕೊಂಡ ಪತ್ನಿ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

ಇದೇ ವೇಳೆ, ಜಯಪುರದಿಂದ ಶೃಂಗೇರಿಯತ್ತ ಸಂಚರಿಸುತ್ತಿದ್ದ ಸಾರಿಗೆ ಬಸ್ ಅಪಘಾತದ ಬಳಿಕ ರಸ್ತೆ ಬದಿಯ ಕಂದಕಕ್ಕೆ ಇಳಿದಿದೆ. ಘಟನೆಯ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.