03 November 2026 |

ಮೂಡುಬಿದಿರೆಯಲ್ಲಿ ಬ್ರೇಕ್ ಫೇಲ್: ಚರಂಡಿಗೆ ಜಾರಿದ ಖಾಸಗಿ ಬಸ್, ಪ್ರಯಾಣಿಕರು ಪಾರು!

  • 03 Nov 2026 06:06:59 PM

ಮೂಡುಬಿದಿರೆ: ಖಾಸಗಿ ಬಸ್ಸಿನ ಬ್ರೇಕ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಚರಂಡಿಗೆ ಜಾರಿದ ಘಟನೆ ಸೋಮವಾರ ಮೂಡುಬಿದಿರೆಯ ಗಾಂಧಿನಗರದ ಬಳಿ ನಡೆದಿದೆ.

 

ಮೂಲ್ಕಿಯಿಂದ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಗಾಂಧಿನಗರದ ಮಾರ್ಗವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬ್ರೇಕ್ ಕೈಕೊಟ್ಟಿದೆ. ಇದರಿಂದ ಚಾಲಕನಿಗೆ ಬಸ್ಸನ್ನು ನಿಯಂತ್ರಿಸಲು ಸಾಧ್ಯವಾಗದೆ, ವಾಹನ ರಸ್ತೆ ಬದಿಗೆ ತಿರುಗಿ ಚರಂಡಿಯಲ್ಲಿ ಸಿಲುಕಿಕೊಂಡಿದೆ.

 

ಘಟನೆಯ ವೇಳೆ ಬಸ್ಸಿನಲ್ಲಿ ಹಲವು ಪ್ರಯಾಣಿಕರಿದ್ದರು. ಆದರೆ ಅದೃಷ್ಟವಶಾತ್ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.