08 November 2026 |

ಕೆಮ್ಮಿನ ಸಿರಪ್ ಸೇವಿಸಿ ನಾಲ್ಕು ವರ್ಷದ ಬಾಲಕಿ ಸಾವು: ಕುಟುಂಬದಲ್ಲಿ ಶೋಕ

  • 08 Nov 2026 11:22:16 AM

ಲಕ್ನೋ: ಮನೆಯಲ್ಲಿ ಇಡಲಾಗಿದ್ದ ಕೆಮ್ಮಿನ ಸಿರಪ್ ಅನ್ನು ಸಂಪೂರ್ಣವಾಗಿ ಕುಡಿದ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೋಷಕರ ಗಮನಕ್ಕೆ ಬಾರದೆ ಮಗು ಸಿರಪ್ ಸೇವಿಸಿದ್ದು, ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

 

ಮಾಹಿತಿಯ ಪ್ರಕಾರ, ಮನೆಯಲ್ಲಿ ಕೆಮ್ಮಿನ ಸಿರಪ್ ಬಾಟಲಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ, ಪೋಷಕರು ಬೇರೆ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಬಾಟಲಿಯಲ್ಲಿದ್ದ ಸಂಪೂರ್ಣ ಸಿರಪ್ ಅನ್ನು ಕುಡಿದಿದ್ದಾಳೆ. ಸ್ವಲ್ಪ ಸಮಯದ ಬಳಿಕ ಆಕೆಗೆ ತೀವ್ರ ನಿದ್ರಾಹೀನತೆ ಬದಲಾಗಿ ಅತಿಯಾದ ತೂಕಡಿಕೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಪೋಷಕರು ತಕ್ಷಣವೇ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಜೀವ ಉಳಿಸಲು ತುರ್ತು ಚಿಕಿತ್ಸೆ ನೀಡಿದರೂ, ಸಿರಪ್‌ನ ಅತಿಯಾದ ಸೇವನೆಯಿಂದ ಉಂಟಾದ ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

 

ನವೆಂಬರ್ 5ರಂದು ನಡೆಯಬೇಕಿದ್ದ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಬಾಲಕಿ ತನ್ನ ತಾಯಿ ರೆಹಾನಾ ಹಾಗೂ ಅಜ್ಜಿ ಶಬೀನಾ ಬೇಗಂ ಅವರೊಂದಿಗೆ ಸಂಬಂಧಿಕರ ಗ್ರಾಮಕ್ಕೆ ತೆರಳಿದ್ದಳು. ಕುಟುಂಬದ ಮಾಹಿತಿ ಪ್ರಕಾರ, 70 ವರ್ಷದ ಸಂಬಂಧಿಕರೊಬ್ಬರು ದೀರ್ಘಕಾಲದಿಂದ ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಬುಧವಾರ ಸಂಜೆ ತಮ್ಮ ಕೊಠಡಿಯಲ್ಲಿದ್ದ ಕೆಮ್ಮಿನ ಸಿರಪ್ ಸೇವಿಸಿ, ಬಾಟಲಿಯನ್ನು ಅಲ್ಲಿಯೇ ಬಿಟ್ಟಿದ್ದರು.

 

ಮರುದಿನ ಆಟವಾಡುತ್ತಿದ್ದ ಬಾಲಕಿಯ ಕೈಗೆ ಆ ಬಾಟಲಿ ಸಿಕ್ಕಿದೆ. ಸಿರಪ್‌ನ ಸಿಹಿ ರುಚಿಗೆ ಆಕರ್ಷಿತಳಾದ ಮಗು ಅದನ್ನು ಕುಡಿಯಲು ಆರಂಭಿಸಿ, ಕೊನೆಗೆ ಸಂಪೂರ್ಣ ಬಾಟಲಿಯನ್ನು ಖಾಲಿ ಮಾಡಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.