ಕುಕ್ಕಾಜೆ: ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಸೋಣ 10ರ ವಿಶೇಷ ಪೂಜಾ ಮಹೋತ್ಸವ ಭಕ್ತಿಪೂರ್ಣವಾಗಿ ನೆರವೇರಿತು. ಈ ಸಂದರ್ಭದಲ್ಲಿ ಕ್ಷೇತ್ರದ ಒಳಾಂಗಣಕ್ಕೆ ಶಾಶ್ವತ ಚಪ್ಪರ ನಿರ್ಮಾಣದ ಮಹತ್ತರ ಕಾರ್ಯಕ್ಕಾಗಿ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮವನ್ನು ಶ್ರೀ ಶ್ರೀಕೃಷ್ಣ ಗುರುಜೀ ಅವರು ನಡೆಸಿ, ಭಕ್ತ ಭಾಂದವರಿಗೆ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು – “ಶಾಶ್ವತ ಚಪ್ಪರ ನಿರ್ಮಾಣ ಕಾರ್ಯ ಕ್ಷೇತ್ರದ ಅಭಿವೃದ್ಧಿಗೆ ಮಾತ್ರವಲ್ಲ, ಭಕ್ತರ ಸೌಕರ್ಯಕ್ಕೂ ಮಹತ್ತರ. ಈ ಪವಿತ್ರ ಕಾರ್ಯಕ್ಕೆ ಎಲ್ಲರೂ ತನು, ಮನ, ಧನಗಳಿಂದ ಸಹಕರಿಸಬೇಕು” ಎಂದು ಕರೆ ನೀಡಿದರು.
ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ಭಕ್ತರ ಉತ್ಸಾಹಕ್ಕೆ ಹೊಸ ಚೈತನ್ಯ ತುಂಬಿತು. ಸಮಾಜಮುಖಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಭಕ್ತ ಸಮುದಾಯವು ಈ ಕಾರ್ಯಕ್ಕೂ ಪ್ರಾಮಾಣಿಕ ಬೆಂಬಲ ನೀಡುವ ನಿರೀಕ್ಷೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರಾದ ಶ್ರೀ ಎಂ.ಕೆ. ಕುಕ್ಕಾಜೆ, ಕಾಳಿಕಾ ಕಲಾ ಸಂಘದ ಅಧ್ಯಕ್ಷ ಶ್ರೀ ವಾಸಪ್ಪ ಹಿರೇಬಂಡಾಡಿ, ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಾಮಜಲು, ಶ್ರೀ ಸತೀಶ್ ಬಾಯಾರು, ಜಾಸ್ಮಿನ್ ಗಣೇಶ್ ನರಿಮೊಗರು, ಸಂಜೀವ ಕುಲಾಲ್ ಪಳನೀರು ಸೇರಿದಂತೆ ಅನೇಕ ಊರ ಪರವೂರ ಭಕ್ತ ಭಾಂದವರು ಉಪಸ್ಥಿತರಿದ್ದರು.