22 October 2025 | Join group

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಾಖಲೆಯ 25 ಸಾವಿರಕ್ಕೂ ಹೆಚ್ಚು ಮಹಿಳಾ ಭಕ್ತರಿಗೆ ಸೀರೆ ವಿತರಣೆ

  • 29 Sep 2025 09:22:39 AM

ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಲಲಿತಾ ಪಂಚಮಿಯ ದಿನ ಭಕ್ತ ಮಹಿಳೆಯರಿಗೆ ಶೇಷವಸ್ತ್ರವಾಗಿ ಸುಮಾರು 25 ಸಾವಿರಕ್ಕೂ ಹೆಚ್ಚು ಸೀರೆಗಳು ವಿತರಿಸಲಾಯಿತು.

 

ಸಂಜೆ ಮೂರರಿಂದಲೇ ಭಕ್ತರು ಸರದಿಯಲ್ಲಿ ನಿಂತಿದ್ದು, ಸಂಜೆ 5 ಗಂಟೆಯಿಂದ ಆರಂಭವಾದ ವಿತರಣೆ ತಡರಾತ್ರಿ ವರೆಗೆ ನಡೆಯಿತು. ಈ ವರ್ಷದಲ್ಲಿ ಒಟ್ಟಾರೆ ಸುಮಾರು 44 ಸಾವಿರ ಸೀರೆಗಳನ್ನು ವಿತರಿಸಲು ದೇವಳವು ಪೂರ್ವಸಿದ್ಧತೆ ಮಾಡಿಕೊಂಡಿತ್ತು.

 

ಭಕ್ತರ ಸಾಲಿನಲ್ಲಿ ನೂಕುನುಗ್ಗಲು ತಪ್ಪಿಸಲು ದೇವಾಲಯದ ಮುಂಭಾಗದಲ್ಲಿ ವಿಶೇಷ ಅಟ್ಟಳಿಗೆ ಅಳವಡಿಸಲಾಗಿತ್ತು.