22 October 2025 | Join group

ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿದ ಭಕ್ತಾದಿಗಳು

  • 05 Oct 2025 06:57:00 PM

ಕಡೇಶಿವಾಲಯ: ಬ್ರಹ್ಮಕಲಶೋತ್ಸವದ ತಯಾರಿಯಲ್ಲಿರುವ ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಎಡ ಬದಿಯಲ್ಲಿ ಇರುವ ಶಿಥಿಲಗೊಂಡ ಹಳೆಯ ಅರ್ಚಕರ ಮನೆಯನ್ನು ಭಕ್ತಾದಿಗಳು ಇಂದು ಅಕ್ಟೋಬರ್ 05 ರಂದು ಕರ ಸೇವೆ ಮೂಲಕ ತೆರವುಗೊಳಿಸುವ ಕೆಲಸ ನಡೆಸಿದರು.



ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ನುಳಿಯಲು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.



ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಈಶ್ವರ ಪೂಜಾರಿ ಹಿರ್ತಡ್ಕ, ಚಿದಾನಂದ ಕಡೇಶಿವಾಲಯ, ಸಂಜೀವ ಪೂಜಾರಿ ದಾಸಕೋಡಿ, ಶೀನ ನಾಯ್ಕ್ ನೆಕ್ಕಿಲಾಡಿ ಹಾಗೂ ಪ್ರಮುಖರಾದ ಕೂಸಪ್ಪ ಪೂಜಾರಿ ಪುನುಕೇದಡಿ, ಹರಿಶ್ಚಂದ್ರ ಕಾಡಬೆಟ್ಟು, ದಯಾನಂದ ಶೆಟ್ಟಿ, ನವೀನ್ ಶೆಟ್ಟಿ ಸೇರಿದಂತೆ ಅನೇಕ ಭಕ್ತಾದಿಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು.