22 October 2025 | Join group

ಅಷ್ಟ ಮಂಗಳ ಪ್ರಶ್ನಾ ಚಿಂತನೆಯಂತೆ ಕಡೇಶಿವಾಲಯದಲ್ಲಿ ಪ್ರಥಮ ದುರ್ಗಾ ಪೂಜೆ ನೆರವೇರಿತು

  • 15 Oct 2025 10:52:49 AM

ಕಡೇಶಿವಾಲಯ: ಮಹಾತೋಬಾರ ಚಿಂತಾಮಣಿ ಶ್ರೀ ಲಕ್ಷೀ ನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯ, ಸಾನಿಧ್ಯದಲ್ಲಿ ಅಷ್ಟ ಮಂಗಳ ಪ್ರಶ್ನಾ ಚಿಂತನೆ ಯಲ್ಲಿ ಕಂಡು ಬಂದಂತೆ 4 ದುರ್ಗಾ ಪೂಜೆ ಪ್ರತಿ 4 ತಿಂಗಳು ನಡೆಯಲಿದೆ.

 

ಅದರಂತೆ ನಿನ್ನೆ ದಿನಾಂಕ 14ನೇ, 2025 ಮಂಗಳವಾರ ಸಂಜೆ ಗಂಟೆ 7:20ಕ್ಕೆ ಪ್ರಥಮ ಶ್ರೀ ದುರ್ಗಾ ಪೂಜೆಯ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು.

 

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ ನುಳಿಯಲು, ಸದಸ್ಯರಾದ ಈಶ್ವರ್ ಪೂಜಾರಿ ಹಿರ್ತಡ್ಕ, ಚಿದಾನಂದ ಕಡೇಶಿವಾಲಯ, ಶೀನ ನಾಯ್ಕ್ ನೆಕ್ಕಿಲಾಡಿ ಮತ್ತಿತರು ಉಪಸ್ಥಿತರಿದ್ದರು ಹಾಗೂ ಭಕ್ತಾದಿಗಳು ಭಾಗವಹಿದ್ದರು.