31 January 2026 | Join group

ಅಮ್ಟೂರಿನಲ್ಲಿ ನಿಟಿಲಾಕ್ಷ ಸದಾಶಿವ ದೇವರ ನೂತನ ಕಟ್ಟೆಯಲ್ಲಿ ವಿಜೃಂಭಣೆಯಿಂದ ನಡೆದ ಅಶ್ವತ ಉದ್ಯಾಪನೆ ಮತ್ತು ಭಜನಾ ಸಂಕೀರ್ತನೆ

  • 04 Nov 2025 07:22:09 PM

ಕಲ್ಲಡ್ಕ: ಶ್ರೀ ನಿಟಿಲಾಕ್ಷ ಲಕ್ಷದೀಪೋತ್ಸವ ಸಮಿತಿ ಹಾಗೂ ಹರೇಕೃಷ್ಣ ಭಕ್ತವೃಂದ ಅಮ್ಟೂರು ಇವರ ಸಾರಥ್ಯದಲ್ಲಿ ನವೀಕರಣಗೊಂಡ ನಿಟಿಲಾಕ್ಷ ಸದಾಶಿವ ದೇವರ ಅಮ್ಟೂರಿನ ನೂತನ ಕಟ್ಟೆಯಲ್ಲಿ ಅಶ್ವತ ಉದ್ಯಾಪನೆ, ಕಟ್ಟೆಪೂಜೆ ಹಾಗೂ ಭಜನಾ ಸಂಕೀರ್ತನೆ ನವೆಂಬರ್ 1ರಂದು ಶನಿವಾರ ವಿಜೃಂಭಣೆಯಿಂದ ನೆರವೇರಿತು.

 

ಮಧ್ಯಾಹ್ನ ಅಶ್ವತ ಕಟ್ಟೆ ಉದ್ಯಾಪನೆಗೊಂಡು ಮಹಾಪೂಜೆ ನೆರವೇರಿತು. ರಾತ್ರಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಕಟ್ಟೆಪೂಜೆ ಜರುಗಿತು. ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸೂರ್ಯೋದಯದಿಂದ ರಾತ್ರಿ 10:30ರವರೆಗೆ ಭಜನಾ ಸಂಕೀರ್ತನ ಸೇವೆ ನಡೆಯಿತು. ಸುಮಾರು 20 ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿ, ವಸುಧೈವ ಭಜನಾ ಕುಟುಂಬ ಮತ್ತು ಅಖಂಡ ಭಾರತದ ಸರ್ವ ಭಜಕರು ಸೇರಿ ಮಂಗಳೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದರು.

ಹಲವು ಗಣ್ಯರು, ವಿಶೇಷ ಅತಿಥಿಗಳು, ಸಂಗೀತ ಕಲಾವಿದರು ಹಾಗೂ ಭಜಕರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸುಮಾರು 1700 ಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಊರ ಹಾಗೂ ಪರವೂರದ ಮಹನೀಯರು, ದಾನಿಗಳ ನೆರವಿನಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಶ್ರೀ ನಿಟಿಲಾಕ್ಷ ಲಕ್ಷದೀಪೋತ್ಸವ ಸಮಿತಿ ಹಾಗೂ ಹರೇಕೃಷ್ಣ ಭಕ್ತವೃಂದ ಅಮ್ಟೂರು ಕೃತಜ್ಞತೆ ಸಲ್ಲಿಸಿದರು.