03 March 2026 | Join group

ದೇವರ ಪೂಜೆಯಲ್ಲಿ ಎಷ್ಟು ಅಗರಬತ್ತಿ ಹಚ್ಚಬೇಕು? ತಪ್ಪಾಗಿ ಮಾಡಿದರೆ ದೋಷವೂ ಉಂಟು!

  • 13 Nov 2025 12:26:13 AM

ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ದೀಪ, ಧೂಪ ಮತ್ತು ನೈವೇದ್ಯ ಸಲ್ಲಿಸುವ ಪದ್ಧತಿ ನಮ್ಮ ಮನೆಯಲ್ಲಿ ಅತಿ ಸಾಮಾನ್ಯ. ಆದರೆ ಅಗರಬತ್ತಿ ಹಚ್ಚುವ ವಿಚಾರದಲ್ಲಿ ಹಲವರಿಗೆ ಚಿಕ್ಕ ಸಂಶಯವಿರುತ್ತದೆ — ಎಷ್ಟು ಅಗರಬತ್ತಿ ಹಚ್ಚಬೇಕು? ಒಂದು, ಎರಡು, ಮೂರು ಅಥವಾ ಐದು? ಕೆಲವರು ಒಂದು ಅಗರಬತ್ತಿ ಹಚ್ಚುತ್ತಾರೆ, ಕೆಲವರು ಐದು. ಆದರೆ ಇದರ ಹಿಂದಿರುವ ಅರ್ಥ ಶಾಸ್ತ್ರಗಳಲ್ಲಿ ವಿವರವಾಗಿದೆ.

 

ಒಂದು ಅಗರಬತ್ತಿ
ಒಂದು ಅಗರಬತ್ತಿ ಹಚ್ಚುವುದರಿಂದ ಮನೆಯಲ್ಲಿ ದುಃಖ, ಅಶಾಂತಿ ಅಥವಾ ರೋಗ ಉಂಟಾಗಬಹುದು ಎಂಬ ನಂಬಿಕೆ ಇದೆ.

 

ಎರಡು ಅಗರಬತ್ತಿ
ಇದು ಸುಶೋಭನದ ಸಂಕೇತ. ಮನೆಯಲ್ಲಿ ಶಾಂತಿ, ಸಂತೋಷ ಮತ್ತು ನಗು ಮೂಡುತ್ತದೆ ಎಂದು ಹೇಳಲಾಗಿದೆ.

 

ಮೂರು ಅಗರಬತ್ತಿ
ಮೂರು ಅಗರಬತ್ತಿ ಹಚ್ಚುವುದು ದೌರ್ಭಾಗ್ಯಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ಸೌಭಾಗ್ಯ ಕ್ರಮೇಣ ಕಡಿಮೆಯಾಗುತ್ತದೆ ಎನ್ನುತ್ತಾರೆ.

 

ನಾಲ್ಕು ಅಗರಬತ್ತಿ
ಇದು ಸಹ ಶೋಭೆ ತರುವಂತದ್ದು. ಮನೆಯಲ್ಲಿ ಸೌಂದರ್ಯ ಮತ್ತು ಧಾರ್ಮಿಕ ವಾತಾವರಣ ಮೂಡುತ್ತದೆ.

 

ಐದು ಅಗರಬತ್ತಿ
ಐದು ಅಗರಬತ್ತಿಯನ್ನು ಪಂಚಕಾರ್ಯ ಸಿದ್ಧಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ದೇವರಿಗೆ ಐದು ಅಗರಬತ್ತಿ ಹಚ್ಚುವುದರಿಂದ ಕಾರ್ಯಸಿದ್ಧಿ, ಶಾಂತಿ ಮತ್ತು ದೈವಾನುಗ್ರಹ ಲಭಿಸುತ್ತದೆ. ಪಂಚ ಅಗರಬತ್ತಿ ಹಚ್ಚುವ ಕ್ರಿಯೆ ಅತ್ಯಂತ ಶ್ರೇಷ್ಠ ಎನ್ನುತ್ತಾರೆ ಪಂಡಿತರು.

 

ತಪ್ಪು ಪದ್ಧತಿಗಳು
ಕೆಲವರು ಅಗರಬತ್ತಿ ಹಚ್ಚಿದ ತಕ್ಷಣ ಆರಿಸುತ್ತಾರೆ — ಇದು ತಪ್ಪು. ದೇವರ ಮುಂದೆ ಹಚ್ಚಿದ ಅಗರಬತ್ತಿ ಸಂಪೂರ್ಣ ಸುಟ್ಟು ಹೋಗುವವರೆಗೂ ಇರಬೇಕು. ಅಗರಬತ್ತಿಯನ್ನು ಅರ್ಧವಾಗಿ ಮುರಿದು ಎರಡು ದಿನ ಬಳಸುವುದು ಅಥವಾ ನೀರಿನಲ್ಲಿ ಆರಿಸಿ ಮರುದಿನ ಹಚ್ಚುವುದು ಕೂಡ ಅಶ್ರದ್ಧೆಯ ಲಕ್ಷಣ. ಇದನ್ನು “ಪೂಜೆ ಯೋಗ್ಯ” ಎನ್ನಲಾಗುವುದಿಲ್ಲ.


ದೇವರಿಗೆ ನೀಡುವ ವಿಷಯದಲ್ಲಿ ಜಿಪುಣತನ ಬೇಡ. ಧಾರಾಳ ಮನಸ್ಸಿನಿಂದ ಹಚ್ಚುವುದು ಶ್ರೇಯಸ್ಕರ. ದೇವರಿಗೆ ಎರಡು ಕೈಗಳಿಂದ ಕೊಟ್ಟರೆ, ಅವರು ಸಾವಿರ ಕೈಗಳಿಂದ ಕೊಡುತ್ತಾರೆ ಎಂಬ ಮಾತಿದೆ. ಆದ್ದರಿಂದ, ದೇವರ ಪೂಜೆಯಲ್ಲಿ ಐದು ಅಗರಬತ್ತಿ ಹಚ್ಚುವುದು ಅತ್ಯಂತ ಶುಭಕರ ಎಂದು ಧಾರ್ಮಿಕ ಪಂಡಿತರು ಹೇಳುತ್ತಾರೆ.

A PHP Error was encountered

Severity: Core Warning

Message: PHP Startup: Unable to load dynamic library 'i360.so' (tried: /usr/local/php74/lib/php/extensions/no-debug-non-zts-20190902/i360.so (libatomic.so.1: cannot open shared object file: No such file or directory), /usr/local/php74/lib/php/extensions/no-debug-non-zts-20190902/i360.so.so (/usr/local/php74/lib/php/extensions/no-debug-non-zts-20190902/i360.so.so: cannot open shared object file: No such file or directory))

Filename: Unknown

Line Number: 0

Backtrace: