03 March 2026 | Join group

ಅಯೋಧ್ಯೆಯಲ್ಲಿ ಧರ್ಮಧ್ವಜ ಸ್ಥಾಪನೆಗೆ ಕಂಗೊಳಿಸುತ್ತಿದ್ದ ಶ್ರೀರಾಮ ಮಂದಿರ

  • 25 Nov 2025 11:01:07 AM

ಅಯೋಧ್ಯೆ: ಶ್ರೀರಾಮ ಮಂದಿರದಲ್ಲಿ ಇದೀಗ ಮತ್ತೊಂದು ಸಡಗರ-ಸಂಭ್ರಮ. ಶ್ರೀರಾಮ ಮಂದಿರವು ದೀಪಗಳಿಂದ ಕಂಗೊಳಿಸುತ್ತಿದ್ದು, ಧರ್ಮಧ್ವಜ ಮಂದಿರದ ಶಿಖರದಲ್ಲಿ ಹಾರಲು ಸನ್ನದ್ಧವಾಗಿದೆ. ಐತಿಹಾಸಿಕ ಶ್ರೀರಾಮ ಮಂದಿರದಲ್ಲಿ ಧರ್ಮಧ್ವಜ ಸ್ಥಾಪನೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪೂಜಾ ಪದ್ಧತಿಗಳನ್ನು ನಡೆಸುತ್ತಿದ್ದಾರೆ.

 

ಧರ್ಮಧ್ವಜ ಸ್ಥಾಪನೆಯ ಪ್ರಯುಕ್ತ ನಿನ್ನೆ ಸೋಮವಾರ ಅಯೋಧ್ಯಾ ದೀಪಾಲಂಕಾರ ಮತ್ತು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಲೇಸರ್ ಶೋಗಳಿಂದ ಪ್ರಕಾಶಮಾನಗೊಂಡಿತ್ತು. ಶ್ರೀರಾಮನ ಜೀವನದ ಪ್ರಮುಖ ಸನ್ನಿವೇಶಗಳನ್ನು ಲೇಸರ್ ಲೈಟ್ ಮೂಲಕ ಪ್ರದರ್ಶನಗೊಳಿಸಲಾಯಿತು.

 

ಪ್ರಧಾನಿ ಮೋದಿಯವರ ಭೇಟಿಗಾಗಿ ಒಟ್ಟು 6,970 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 90ಕ್ಕಿಂತ ಹೆಚ್ಚು ತಾಂತ್ರಿಕ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಬಿಗಿಗೊಳಿಸಲಾಗಿದೆ.

 

ಅಯೋಧ್ಯಾ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಭಯೋತ್ಪಾದನಾ ನಿಗ್ರಹ ದಳ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ , ಮತ್ತು ಸೈಬರ್‌ ಭದ್ರತಾ ತಂಡಗಳನ್ನು ನಿಯೋಜಿಸುವುದರ ಮೂಲಕ ಸ್ನೈಪರ್ ಸೆಲ್ ಗಳು, ಡ್ರೋನ್ ಮೂಲಕ ಇಡೀ ಮಂದಿರ ಮತ್ತು ನಗರದ ಸುತ್ತಮುತ್ತ ನಿಗಾ ಇರಿಸಲಾಗಿತ್ತು.

 

ಅಯೋಧ್ಯಾ ಈಗ ವಿಶ್ವದಲ್ಲೇ ಅತೀ ದೊಡ್ಡ ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಾಗಿದೆ. ವರ್ಷದಾದ್ಯಂತ ಕೋಟಿಗಟ್ಟಲೆ ಜನ ಶ್ರೀರಾಮನ ದರ್ಶನಕ್ಕೆ ಭೇಟಿ ನೀಡಿದ್ದು, ಇಡೀ ಉತ್ತರ ಪ್ರದೇಶದ ಭವಿಷ್ಯವನ್ನೇ ಬದಲಾಯಿಸಿದೆ.

A PHP Error was encountered

Severity: Core Warning

Message: PHP Startup: Unable to load dynamic library 'i360.so' (tried: /usr/local/php74/lib/php/extensions/no-debug-non-zts-20190902/i360.so (libatomic.so.1: cannot open shared object file: No such file or directory), /usr/local/php74/lib/php/extensions/no-debug-non-zts-20190902/i360.so.so (/usr/local/php74/lib/php/extensions/no-debug-non-zts-20190902/i360.so.so: cannot open shared object file: No such file or directory))

Filename: Unknown

Line Number: 0

Backtrace: