ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ 2025 : ಭಾರತ - ಪಾಕಿಸ್ತಾನ ಪಂದ್ಯ, ಕ್ರಿಕೆಟ್ ಪ್ರೇಮಿಗಳು ದುಬೈಗೆ..

  • 07 Feb 2025 12:04:10 AM

Champions Trophy 2025 : ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯುವ ಚಾಂಪಿಯನ್ಸ್ ಟ್ರೋಫಿ 2025 ಈ ಭಾರಿ ಕುತೂಹಲಕಾರಿಯಾಗಲಿದೆ. ಯಾಕೆಂದರೆ, ಭಾರತದ ಜೊತೆಗಿನ ಪಂದ್ಯಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ದೇಶಗಳ ನಡುವಿನ ಪಂದ್ಯ ಪಾಕಿಸ್ತಾನದ ನೆಲದಲ್ಲೇ ನಡೆಯಲಿದೆ.ದುಬೈ ಮತ್ತು ಪಾಕಿಸ್ತಾನದ ಆಥಿತ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯುವ  ಚಾಂಪಿಯನ್ಸ್ ಟ್ರೋಫಿಯಲ್ಲಿ 8 ತಂಡಗಳು ಭಾಗವಹಿಸಲಿದೆ. 19ರ ಫೆಬ್ರವರಿಯಂದು ಪಾಕಿಸ್ತಾನ ಮತ್ತು ನ್ಯೂಜಿಲಂಡ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆಯಲಿದ್ದು, ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ.

 

ಕುತೂಹಲಕಾರಿಯಾದ ಭಾರತ - ಪಾಕಿಸ್ತಾನದ ಪಂದ್ಯ ಫೆಬ್ರವರಿ 23 ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಭಾರತ ದೇಶ ಪಾಕಿಸ್ತಾನ ಪ್ರವಾಸವನ್ನು ಒಪ್ಪದ ಕಾರಣ ಈ ದೇಶಗಳ ನಡುವೆ ನಡೆಯಲಿರುವ ಎಲ್ಲಾ ಪಂದ್ಯಗಳನ್ನು ದುಬೈಗೆ ಹಸ್ತಾಂತಿರಿಸಲಾಗಿದೆ. ಭಾರತದ ಎಲ್ಲಾ ಲೀಗ್ ಹಂತದ 3 ಮ್ಯಾಚುಗಳು ಅಲ್ಲೇ ನಡೆಯಲಿದೆ.ಭಾರತ ಪಾಕಿಸ್ತಾನದ ಪಂದ್ಯದ ಟಿಕೆಟ್ ಗಳು ಒಂದೇ ದಿವಸದಲ್ಲಿ ಸೋಲ್ಡ್ ಔಟ್ ಆಗಿದೆ.

 

ಯಾವೆಲ್ಲಾ ಟೀಮ್ ಗಳ ಜೊತೆ ಟೀಮ್ ಇಂಡಿಯಾ ಲೀಗ್ ಪಂದ್ಯಗಳಲ್ಲಿ ಆಡಲಿದೆ ?
ಟೀಮ್ ಇಂಡಿಯಾ ಫೆಬ್ರವರಿ 20 ರಂದು ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧಆಡಲಿದೆ. ಇದು ಚಾಂಪಿಯನ್ ಟ್ರೋಫಿ ಎರಡನೇ ಪಂದ್ಯವಾಗಿರುತ್ತದೆ. ಫೆಬ್ರವರಿ 23 ರಂದು ಬದ್ಧ ವೈರಿ ತಂಡವಾದ ಪಾಕಿಸ್ತಾನವನ್ನು ಎದುರಿಸಲಿದೆ. ಆ ನಂತರ ಮಾರ್ಚ್ 3 ರಂದು ತನ್ನ ಕೊನೆಯ ಲೀಗ್ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಭಾರತ ಫೈನಲ್ ತಲುಪಿದರೆ ಮತ್ತೆ ದುಬೈನಲ್ಲಿ ಟೀಮ್ ಇಂಡಿಯಾ ಮತ್ತು ವಿರುದ್ಧ ತಂಡದ ಮದ್ಯೆ ಚಾಂಪಿಯನ್ಸ್ ಟ್ರೋಫಿ 2025 ನ ಫೈನಲ್ ಮ್ಯಾಚ್ ನಡೆಯಲಿದೆ.

 

ಎಷ್ಟು ತಂಡಗಳು 2025 ರ ಚಾಂಪಿಯನ್ ಟ್ರೋಫಿ ಕಪ್ ನಲ್ಲಿ ಭಾಗವಹಿಸಲಿದೆ ?
ಪ್ರತಿ ವರ್ಷದಂತೆ ತಂಡ "ಎ" ಮತ್ತು ತಂಡ ಬಿ ಗಳಾಗಿ ಎರಡು ಗ್ರೂಪ್ ಮಾಡಲಾಗಿದೆ. ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಭಾರತ, ಬಾಂಗ್ಲಾದೇಶ್, ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ "ಎ" ತಂಡದಲ್ಲಿ ಕಾಣಿಸಿಕೊಳ್ಳಲಿದೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ತಂಡಗಳು "ಬಿ" ಬಣದಲ್ಲಿರಲಿದೆ. 

 

ಟೀಮ್ ಇಂಡಿಯಾದ ಆಟಗಾರರ ಪಟ್ಟಿ ಈ ರೀತಿ ಇದೆ.
ಬಿಸಿಸಿಐ ಒಟ್ಟು 15 ಆಟಗಾರರ ತಂಡವನ್ನು ಚಾಂಪಿಯನ್ ಟ್ರೋಫಿ 2025 ಕಳುಹಿಸಲಿದೆ. ರೋಹಿತ್ ಶರ್ಮ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಐಯರ್, ವಿರಾಟ್ ಕೊಹ್ಲಿ ಟಾಪ್ ಆರ್ಡರ್ ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ವಿಕೆಟ್ ಕೀಪರ್ ಗಳಾಗಿ ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ನೇಮಕಗೊಂಡಿದ್ದಾರೆ. 

ಉಪ ಕಪ್ತಾನ ಶುಭಮನ್ ಗಿಲ್ ಮತ್ತು ಯಶಸ್ವೀ ಜೈಸ್ವಾಲ್ ಆರಂಭಿಕ ಬ್ಯಾಟ್ಸಮನ್ ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.ಆಲ್ ರೌಂಡರ್ ಗಳಾಗಿ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ , ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಬೌಲರ್ಸ್ ಗಳಾಗಿ ಅರ್ಶದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ತಂಡವನ್ನು ಮುನ್ನಡೆಸಲ್ಲಿದಾರೆ. ಟೀಮ್ ಇಂಡಿಯಾ ಪ್ರತಿ ವರುಷದಂತೆ ಬಲಿಷ್ಠ ತಂಡವನ್ನು ಹೊಂದಿದೆ ಮತ್ತು ಟ್ರೋಫಿ ಎತ್ತಲು ಸಶಕ್ತ ತಂಡವಾಗಿದೆ.

 

ಭಾರತ - ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್ ಗಳು ಗಂಟೆಯೊಳಗೆ ಫಿನಿಷ್ :
ಫೆಬ್ರವರಿ 5 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್ ಮಾರಾಟವನ್ನು ಐಸಿಸಿ ಆರಂಭಿಸಿದ ಗಂಟೆಯೊಳಗೆ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಭಾರತ ಮತ್ತು ಪಾಕಿಸ್ತಾನದ ಹೈ ವೋಲ್ಟೇಜ್ ಮ್ಯಾಚ್ ನೋಡಲು ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ದುಬೈಗೆ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸಲಿದ್ದಾರೆ. ಈ ಸಲ ಐಸಿಸಿ ಟಿಕೆಟ್ ದರವನ್ನು ಹೆಚ್ಚಳ ಮಾಡಿದರಾದರೂ ಕ್ರಿಕೆಟ್ ಪ್ರೇಮಿಗಳು ಟಿಕೆಟ್ ಬೆಲೆಯನ್ನು ಲೆಕ್ಕಿಸದೆ ಖರೀದಿ ಮಾಡಿದ್ದಾರೆ. ಬಹಳಷ್ಟು ಅಭಿಮಾನಿಗಳಿಗೆ ಟಿಕೆಟ್ ಸಿಗದೆ ತುಂಬಾ ನಿರಾಶೆಯಾಗಿದೆ. ಒಂದು ಟಿಕೆಟ್ ಬೆಲೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿದೆ ಎಂದು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. 

 

ಟೀಮ್ ಇಂಡಿಯಾ ಈ ಭಾರಿಯ ಚಾಂಪಿಯನ್ಸ್ ಟ್ರೋಫಿ ಯನ್ನು ಎತ್ತಲು ಸಜ್ಜಾಗಿದ್ದು, ಮತ್ತೊಂದು ಐಸಿಸಿ ಟ್ರೋಫಿಯನ್ನು ತನ್ನದಾಗಿಸಲು ಉತ್ಸುಕದಲ್ಲಿದೆ. ಟೀಮ್ ಇಂಡಿಯಾದ ಅಭಿಮಾನಿಗಳು ಮತ್ತು ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಚಾಂಪಿಯನ್ ಟ್ರೋಫಿ 2025 ಯನ್ನು ನೋಡಿ ಆನಂದಿಸಲು ಕಾತುರದಿಂದ ಕಾಯುತ್ತಿದ್ದಾರೆ.